July 30, 2026
WhatsApp Image 2026-07-29 at 6.52.11 PM

ಅಮೆರಿಕದ ಹೌಸ್ ಫಾರಿನ್ ಅಫೇರ್ಸ್ ಸಮಿತಿಯ ರ್ಯಾಂಕಿಂಗ್ ಸದಸ್ಯ, ಅಮೆರಿಕದ ಸಂಸತ್ತಿನ ಸದಸ್ಯ, ಪ್ರಸಿದ್ಧ ನಾಗರಿಕ ಹಕ್ಕುಗಳ ಹೋರಾಟಗಾರ ರೆವರೆಂಡ್ ಜೆಸ್ಸಿ ಜಾಕ್ಸನ್ ಅವರ ಪುತ್ರ ಹಾಗೂ ಅಮೆರಿಕದ ರಾಜಕೀಯದಲ್ಲಿ ‘ಭವಿಷ್ಯದ ಬರಾಕ್ ಒಬಾಮಾ’ ಎಂದು ಹಲವರಿಂದ ಗುರುತಿಸಲ್ಪಡುವ ನಾಯಕ ಜೊನಾಥನ್ ಜಾಕ್ಸನ್ ಅವರು, ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಯು. ಟಿ. ಖಾದರ್ ಫರೀದ್ ಅವರ ಸಾರ್ವಜನಿಕ ಸೇವೆ ಮತ್ತು ನಾಯಕತ್ವದ ಸಾಧನೆಗಳನ್ನು ದಾಖಲಿಸಿರುವ ಪ್ರತಿಷ್ಠಿತ “ಫಾರ್ ದಿ ಕಾಂಗ್ರೆಸ್ಸಿನಲ್ ರೆಕಾರ್ಡ್ ” ದಾಖಲೆಯನ್ನು ಗೌರವಪೂರ್ವಕವಾಗಿ ಪ್ರದಾನ ಮಾಡಿದರು.


ಈ ದಾಖಲೆ ಅಮೆರಿಕದ ಸಂಸತ್ತಿನ ಆರ್ಚಿವ್ಸ್ ನಲ್ಲಿ ಅಧಿಕೃತವಾಗಿ ದಾಖಲಾಗಿದ್ದು, ಅಮೆರಿಕದ ಸಂಸತ್ತಿನ ಗ್ರಂಥಾಲಯ ದಲ್ಲಿ ಶಾಶ್ವತವಾಗಿ ಸಂರಕ್ಷಿಸಲ್ಪಡಲಿದೆ. ಜೊತೆಗೆ, ಅಮೆರಿಕದ ಕ್ಯಾಪಿಟಲ್ ಹಿಲ್‌ನ ಸೆಂಟ್ರಲ್ ರೋಟುಂಡಾದಲ್ಲಿ ಪ್ರದಾನಗೊಳ್ಳುವ ಪ್ರತಿಷ್ಠಿತ ಕಾಂಗ್ರೆಸ್ಸಿನಲ್ ಚಾಲೆಂಜ್ ಮೆಡಲಿಯನ್ ಅನ್ನು ಜುಲೈ 28ರಂದು ವಾಷಿಂಗ್ಟನ್ ಡಿ.ಸಿ.ಯಲ್ಲಿ ಡಾ. ಯು. ಟಿ. ಖಾದರ್ ಫರೀದ್ ಅವರಿಗೆ ಗೌರವಪೂರ್ವಕವಾಗಿ ಪ್ರದಾನಿಸಲಾಯಿತು.


ಈ ಐತಿಹಾಸಿಕ ಕ್ಷಣಕ್ಕೆ ಅಮೆರಿಕದ ಸಂಸತ್ತಿನ ಸದಸ್ಯ ಜೊನಾಥನ್ ಜಾಕ್ಸನ್ ಅವರ ಹಿರಿಯ ಸಲಹೆಗಾರ ಡಾ. ವಿಜಯ್ ಜಿ. ಪ್ರಭಾಕರ್ ಹಾಗೂ AMEC USA ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ನವೀನ್‌ಚಂದ್ರ ಕರ್ಣ ಸಾಕ್ಷಿಯಾದರು.

About The Author

Leave a Reply