May 11, 2026
WhatsApp Image 2026-05-11 at 2.36.21 PM

ಮಂಗಳೂರು ನಗರದಲ್ಲಿ ಈಗ ಹೊಸದೊಂದು ಅಪಾಯ ತಲೆ ಎತ್ತಿದೆ. Instagram Follow ಮಾಡಿ”, “ಪ್ರಾಂಕ್ ಮಾಡ್ತೀವಿ”, “ಜುಜುಬಿ ಗಿಫ್ಟ್ ಕೊಡ್ತೀವಿ” ಎಂಬ ಹೆಸರಿನಲ್ಲಿ ಯುವತಿಯರನ್ನು ಗುರಿಯಾಗಿಸಿಕೊಂಡು ಕೆಲ ಯುವಕರ ತಂಡಗಳು ಬೀದಿಗಿಳಿದಿವೆ. ಇದು ಕೇವಲ ಮೋಜಲ್ಲ, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡುವ ಟ್ರ್ಯಾಪ್.

ಏನಾಗುತ್ತಿದೆ ಮಂಗಳೂರಿನಲ್ಲಿ?

ರೈಲ್ವೆ ಸ್ಟೇಷನ್, ಶಾಪಿಂಗ್ ಮಾಲ್, ಕಾಲೇಜು ರಸ್ತೆ, ಮಾರ್ಕೆಟ್ – ಇವೇ ಇವರ ಅಡ್ಡಾಗಳು. ಕೈಯಲ್ಲಿ ಹಣದ ಕಂತೆ, ಇನ್ನೊಂದು ಕೈಯಲ್ಲಿ ಗಿಫ್ಟ್ ಬ್ಯಾಗ್ ಹಿಡಿದುಕೊಂಡು ಯುವತಿಯರ ಗುಂಪನ್ನು ಅಡ್ಡಗಟ್ಟುತ್ತಾರೆ. “ಒಂದು Question ಕೇಳ್ತೀವಿ”, “Follow ಮಾಡಿದ್ರೆ ಗಿಫ್ಟ್” ಅಂತ ಮಾತು ಶುರು ಮಾಡುತ್ತಾರೆ. ನಂಬರ್ ಕೇಳುತ್ತಾರೆ, ಸ್ನೇಹ ಬೆಳೆಸಲು ಯತ್ನಿಸುತ್ತಾರೆ.

ಕೆಲವು ಯೂಟ್ಯೂಬರ್‌ಗಳು “ವೈರಲ್” ಆಗುವ ಹುಚ್ಚಿಗೆ ಬಿದ್ದು ಇದನ್ನೇ ಕಂಟೆಂಟ್ ಮಾಡಿಕೊಂಡಿದ್ದಾರೆ. ಹೆಣ್ಣುಮಕ್ಕಳ ಅನುಮತಿ ಇಲ್ಲದೆ ವಿಡಿಯೋ ಮಾಡಿ, ಅವರ ಮುಜುಗರದ ಕ್ಷಣಗಳನ್ನು ಲಕ್ಷ ಲೈಕ್ಸ್‌ಗಾಗಿ ಬಳಸಿಕೊಳ್ಳುತ್ತಿದ್ದಾರೆ. ಕಾಸರಗೋಡು, ಉಪ್ಪಳ ಭಾಗದಿಂದಲೂ ಬಂದು ಈ ಕೆಲಸ ಮಾಡುತ್ತಿರುವ ಬಗ್ಗೆ ಸ್ಥಳೀಯರ ದೂರುಗಳಿವೆ.

ಇದು ಯಾಕೆ ಅಪಾಯಕಾರಿ?

ಟ್ರ್ಯಾಪ್‌ನ ಮೊದಲ ಹೆಜ್ಜೆ: ಇಂದು ಗಿಫ್ಟ್, ನಾಳೆ ಸ್ನೇಹ, ನಾಡಿದ್ದು ಬ್ಲ್ಯಾಕ್‌ಮೇಲ್. 2025 ಜುಲೈನಲ್ಲಿ ಮಂಗಳೂರಿನ ಮುಲ್ಕಿಯಲ್ಲಿ Instagram ಸ್ನೇಹದ ಹೆಸರಿನಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಕಿರುಕುಳ ನೀಡಿದ ಘಟನೆ ನಡೆದಿದೆ. ಗುರುಪುರದಲ್ಲಿ 7 ಜನರ ತಂಡ ಇದೇ ರೀತಿ ಯುವತಿಯನ್ನು ಬಳಸಿಕೊಂಡ ಪ್ರಕರಣ ದಾಖಲಾಗಿದೆ.
ವೈರಲ್ ಹುಚ್ಚು: Views, Followersಗಾಗಿ ಕೆಲವರು ಯಾವ ಮಟ್ಟಕ್ಕೂ ಇಳಿಯುತ್ತಾರೆ. ಬೆಂಗಳೂರು ಮೆಟ್ರೋದಲ್ಲಿ ಮಹಿಳೆಯರ ವಿಡಿಯೋ ಕದ್ದುಮುಚ್ಚಿ ತೆಗೆದು ಅಪ್‌ಲೋಡ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದರು.
ಕೈತಪ್ಪಿದರೆ ಮುಗೀತು: ಒಮ್ಮೆ ನಂಬರ್ ಕೊಟ್ಟರೆ, ಒಮ್ಮೆ ಫೋಟೋ-ವಿಡಿಯೋ ಸಿಕ್ಕಿಹಾಕಿಕೊಂಡರೆ ಮತ್ತೆ ವಾಪಸ್ ಬರುವುದು ಕಷ್ಟ. ಪಾಪದ ಹೆಣ್ಣುಮಕ್ಕಳು ಜೀವನವನ್ನೇ ಕಳೆದುಕೊಳ್ಳುತ್ತಾರೆ.

ನಮ್ಮ ಜವಾಬ್ದಾರಿ ಏನು?

ಯುವತಿಯರೇ ಎಚ್ಚರ: ಅಪರಿಚಿತರು ಗಿಫ್ಟ್ ಕೊಡ್ತೀವಿ, Follow ಮಾಡಿ ಅಂದರೆ ಸ್ಪಷ್ಟವಾಗಿ “ಬೇಡ” ಅನ್ನಿ. ನಂಬರ್ ಕೊಡಬೇಡಿ. ಒಬ್ಬರೇ ಇರುವಾಗ ಇಂತಹವರನ್ನು Avoid ಮಾಡಿ. ಅನುಮತಿ ಇಲ್ಲದೆ ವಿಡಿಯೋ ಮಾಡಿದರೆ ಜೋರಾಗಿ ಪ್ರಶ್ನಿಸಿಪೋಷಕರೇ ಗಮನಿಸಿ: ನಿಮ್ಮ ಹೆಣ್ಣು ಮಕ್ಕಳಿಗೆ ಸೋಶಿಯಲ್ ಮೀಡಿಯಾ ಅಪಾಯಗಳ ಬಗ್ಗೆ ತಿಳಿಸಿ. ಅಪರಿಚಿತರ Friend Request, Online ಸ್ನೇಹ, ಗಿಫ್ಟ್ ಆಮಿಷ – ಇವುಗಳಿಂದ ದೂರ ಇರಲು ಹೇಳಿ. ಮಕ್ಕಳ ಫೋನ್, ಚಟುವಟಿಕೆಗಳ ಮೇಲೆ ನಿಗಾ ಇಡಿ.
ಸಾರ್ವಜನಿಕರೇ ಧ್ವನಿ ಎತ್ತಿ: ಮಾಲ್, ಕಾಲೇಜು, ಬಸ್ ಸ್ಟ್ಯಾಂಡ್‌ನಲ್ಲಿ ಇಂತಹ ಪುಂಡಾಟಿಕೆ ಕಂಡರೆ ಸುಮ್ಮ ಇರಬೇಡಿ. ತಕ್ಷಣ ಸೆಕ್ಯುರಿಟಿ ಅಥವಾ112ಗೆ ಕರೆ ಮಾಡಿ. ನಾವು ಎಚ್ಚೆದೆ ಕೊಡದಿದ್ದರೆ ಮುಂದೆ ಬರುವ ಹಣವುತ ತಪ್ಪಿಸುವ

ಮಂಗಳೂರಿನ ಸಂಸ್ಕೃತಿ, ಹೆಣ್ಣುಮಕ್ಕಳ ಘನತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. 100 ರೂಪಾಯಿ ಗಿಫ್ಟ್‌ಗೆ ಜೀವನ ಹಾಳು 8ಮಾಡಿಕೊಳ್ಳಬೇಡಿ. ಜಾಗೃತರಾಗಿರಿ, ಸುರಕ್ಷಿತರಾಗಿರಿ.

ಒಂದು ಅನಾಹುತ ಆದಮೇಲೆ ಅನುಭವಿಸಿ ಪ್ರಯೋಜನ ಇಲ್ಲ. ಈಗಲೇ ಎಚ್ಚೆತ್ತುಕೊಳ್ಳೋಣ.

ತುರ್ತು ಸಹಾಯಕ್ಕೆ: ಮಂಗಳೂರು ಸಿಟಿ ಪೊಲೀಸ್ ಕಂಟ್ರೋಲ್ ರೂಮ್: 0824-2220500, ತುರ್ತು: 112

ವರದಿ
ರಿಯಾಝ್ ಹರೇಕಳ✍️

About The Author

Leave a Reply