July 10, 2026
WhatsApp Image 2026-07-10 at 4.16.52 PM

ಕಡಬ: ಸುಬ್ರಮಣ್ಯ ಗ್ರಾಮದ ಅಜ್ಜಿಹಿತ್ಲು ಸಮೀಪದ ಲಾಡ್ಜ್‌ನಲ್ಲಿ ತಂಗಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ರಾಮನಗರ ಜಿಲ್ಲೆಯ ಉಚ್ಚಮ್ಮನದೊಡ್ಡಿ ನಿವಾಸಿ ಮಧು ಎಸ್. (30) ಅವರು ಜುಲೈ 8ರಂದು ಸುಬ್ರಹ್ಮಣ್ಯದ ಅಜ್ಜಿಹಿತ್ಲು ಪ್ರದೇಶದಲ್ಲಿರುವ ಲಾಡ್ಜ್‌ಗೆ ಬಂದು ಕೊಠಡಿ ಬಾಡಿಗೆಗೆ ಪಡೆದು ತಂಗಿದ್ದರು.

ಜುಲೈ 9ರಂದು ಸಂಜೆ ಲಾಡ್ಜ್ ಸಿಬ್ಬಂದಿ ಅವರು ತಂಗಿದ್ದ ಕೊಠಡಿಯ ಬಾಗಿಲು ತೆರೆಯುವಂತೆ ಕರೆದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ, ಮಧು ಅವರು ಕೊಠಡಿಯೊಳಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ.

ಈ ಸಂಬಂಧ ಲಾಡ್ಜ್‌ನ್ನು ಲೀಸ್‌ಗೆ ಪಡೆದು ನಡೆಸುತ್ತಿರುವ ಐನೇಕಿದು ಗ್ರಾಮ ಕಡಬ ಜಗದೀಶ್ ಪಡ್ಪು (51) ಅವರು ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 15/2026ರಡಿ ಬಿಎನ್‌ಎಸ್‌ಎಸ್ ಕಲಂ 194(3)(4) ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About The Author

Leave a Reply