July 11, 2026
WhatsApp Image 2026-07-11 at 9.57.40 AM

ಪುತ್ತೂರು: ಕುರಿಯ ಸರಕಾರಿ ಉ.ಹಿ.ಪ್ರಾ. ಶಾಲಾ ಹಿತೈಷಿ ಬಳಗದ ಸಮಾಗಮ ಕಾಠ್ಯಕ್ರಮ ಜು. 7 ರಂದು ಶಾಲಾ ಸಭಾಂಗಣದಲ್ಲಿ ಜರಗಿತು.
ಶಾಲಾ ಹಿತೈಷಿ ಬಳಗದ ಅಧ್ಯಕ್ಷರಾಗಿರುವ ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲುಗುತ್ತುಅವರು ಸಮಾರಂಭವನ್ನು ಉದ್ಘಾಟಿಸಿ, ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿ ಕುರಿಯ ಶಾಲೆಯನ್ನು ಸಮಗ್ರ ಅಭಿವೃದ್ಧಿಯನ್ನು ಮಾಡುವುದೇ ನಮ್ಮ ಸಂಘಟನೆಯ ಗುರಿಯಾಗಿದ್ದು, ಶಾಲೆಯ ಎಲ್ಲಾ ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕ ಮಾಡಲಿದ್ದೇವೆ, ಈಗಾಗಲೇ ಹಲವು ಮಂದಿ ಹಿರಿಯ ವಿದ್ಯಾರ್ಥಿಗಳು ನಮಗೆ ಸಂಪರ್ಕಕ್ಕೆ ಲಭ್ಯರಾಗಿದ್ದು, ಅವರುಗಳು ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರವನ್ನು ನೀಡುವುದಾಗಿ ತಿಳಿಸಿದ್ದಾರೆ. ನ್ನು ಹೊಂದಿದ್ದೇವೆ. ಊರಿನವರು ಮತ್ತು ಎಲ್ಲಾ ಹಿರಿಯ ವಿದ್ಯಾರ್ಥಿಗಳು ಕುರಿಯ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಶಾಲೆಯು ಸರ್ವೋತೋಮುಖ ಅಭಿವೃದ್ಧಿಯನ್ನು ಸಾಧಿಸಲಿ- ಬೂಡಿಯಾರ್ ರಾಧಾಕೃಷ್ಣ ರೈ
ಶಾಲಾ ಹಿತೈಷಿ ಬಳಗದ ಗೌರವಾರ್ಧಕ್ಷರಾಗಿರುವ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ ಕುರಿಯ ಶಾಲೆಯು ಅಭಿವೃದ್ಧಿಯಾಗಬೇಕು ಎಂಬುದೇ ನನ್ನ ಮನಸಿನ ಬಹುವರ್ಷಗಳ ಕನಸಾಗಿತ್ತು, ಇದೀಗ ಕುರಿಯ ಶಾಲೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಶಾಲಾ ಹಿತೈಷಿ ಬಳಗವನ್ನು ರಚಿಸಲಾಗಿದೆ, ಇದರ ಅಧ್ಯಕ್ಷತೆಯನ್ನು ಶಿವರಾಮ ಆಳ್ವರಿಗೆ ನೀಡಿದ್ದು, ಖುಷಿಯ ವಿಚಾರ, ನಾಯಕತ್ವವನ್ನು ಮೈಗೂಡಿಸಿಕೊಂಡಿರುವ, ಎಲ್ಲರನ್ನು ಒಂದಾಗಿ ಸೇರಿಸಿಕೊಂಡು ಹೋಗುವ ಶಿವರಾಮ ಆಳ್ವರವರ ನೇತ್ರತ್ವದಲ್ಲಿ ಶಾಲೆಯು ಸರ್ವೋತೋಮುಖ ಅಭಿವೃದ್ಧಿಯನ್ನು ಸಾಧಿಸಲಿ ಎಂದು ಶುಭಹಾರೈಸಿದರು.
ನನ್ನ ಸಂಪೂರ್ಣ ಬೆಂಬಲ ಇದೆ- ಬೂಡಿಯಾರ್ ಪುರುಷೋತ್ತಮ ರೈ
ಶಾಲಾ ಹಿತೈಷಿ ಬಳಗದ ಗೌರವಾರ್ಧಕ್ಷರಾಗಿರುವ ಪುತ್ತೂರು ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಬೂಡಿಯಾರ್ ಪುರುಷೋತ್ತಮ ರ ಅವರು ಮಾತನಾಡಿ ಶಾಲೆ ಮತ್ತು ದೇವಾಲಯ ಎರಡು ನಮ್ಮ ಕಣ್ಣು ಇದ್ದಂತೆ, ಕುರಿಯ ಶಾಲೆಯ ಅಭಿವೃದ್ಧಿಗೆ ನಾನು ಯಾವಾಗಲೂ ಸಂಪೂರ್ಣ ಬೆಂಬಲ ಇದೆ. ನಾನು ಜನಪ್ರತಿನಿಧಿಯಾಗಿದ್ದ ವೇಳೆ ಹಲವು ಅನುದಾನವನ್ನು ಶಾಲೆಗೆ ನೀಡಿದ್ದೇನೆ, ನಾವೆಲ್ಲ ಒಗ್ಗಟಾಗಿ ಕುರಿಯ ಶಾಲೆಯ ಅಭಿವೃದ್ಧಿಗಾಗಿ ಸಂಕಲ್ಪವನ್ನು ಮಾಡೋಣ ಎಂದರು.

ಸಮಗ್ರ ಅಭಿವೃದ್ಧಿಯನ್ನು ಮಾಡುವ ಉದ್ದೇಶ- ರಮೇಶ್ ರೈ ಡಿಂಬ್ರಿ
ಶಾಲಾ ಹಿತೈಷಿ ಬಳಗದ ಪ್ರಧಾನ ಕಾರ್ಯದರ್ಶಿಯಾಗಿ, ಅರ್ಯಾಪು ಗ್ರಾ.ಪಂ, ಮಾಜಿ ಸದಸ್ಯ ರಮೇಶ್ ರೈ ಡಿಂಬ್ರಿ ಅವರು ಸ್ವಾಗತಿಸಿ, ಮಾತನಾಡಿ ಕುರಿಯ ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು, ಹಿತೈಷಿಗಳನ್ನು, ಊರ-ಪರವೂರ ದಾನಿಗಳ ಸಹಕಾರದಿಂದ ಕುರಿಯ ಶಾಲೆಯ ಸಮಗ್ರ ಅಭಿವೃದ್ಧಿಯನ್ನು ಮಾಡುವ ಉದ್ದೇಶದಿಂದ ಸಂಘಟನೆಯನ್ನು ಹುಟ್ಟು ಹಾಕಲಾಗಿದೆ ಎಂದರು.

ಪುತ್ತೂರು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಕೆ.ಎಸ್.ರವೀಂದ್ರನಾಥ ರೈ ಬಳ್ಳಮಜಲುಗುತ್ತು, ಶಾಲಾ ಹಿತೈಷಿ ಬಳಗದ ಉಪಾಧ್ಯಕ್ಷ ಅರುಣ್ ರೈ ಡಿಂಬ್ರಿ, ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ರೈ ಅಡ್ಕತ್ತಿಮಾರು, ಅರ್ಚಕ ಪ್ರಕಾಶ್ ರಾವ್ ಕೊಡ್ಲಾರು, ಶಿಕ್ಷಕಿ ಭಾಗ್ಯ ಶ್ರೀ, ಕುರಿಯ ಶಾಲಾ ನಿವೃತ್ತ ಶಿಕ್ಷಕ ಅಬ್ರಾಹಾಂ ರವರುಗಳು ವಿವಿಧ ಸಲಹೆ ಸೂಚನೆಯನ್ನು ನೀಡಿದರು.
ವೇದಿಕೆಯಲ್ಲಿ ಶಾಲಾ ಹಿತೈಷಿ ಬಳಗದ ಉಪಾಧ್ಯಕ್ಷ ಅಬೂಬಕ್ಕರ್ ಜಿಂದಗಿ, ಜೊತೆ ಕಾರ್ಯದರ್ಶಿ ಸನತ್ ರೈ ಕುರಿಯ ಏಳಾಡುಗುತ್ತು ಉಪಸ್ಥಿತರಿದ್ದರು ಶಿಕ್ಷಕಿಯರಾದ ನಳಿನಿ, ಕಾವ್ಯ, ಯಜ್ಞ ಸಹಕರಿಸಿದರು. ಶಾಲಾ ಮುಖ್ಯಗುರು ಫೆಲ್ಸಿಟಾ ಡಿ ಕುನ್ಹಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಜಬ್ಬಾರ್ ವಂದಿಸಿದರು. ಶಿಕ್ಷಕಿ ಕವಿತಾ ಪಿ.ಎನ್ ಕಾಠ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿಗಳಾದ ಗಣೇಶ್ ರೈ ಬೂಡಿಯಾರ್, ವಿಜಯಹರಿ ರೈ ಬಳ್ಳಮಜಲು, ಸುರೇಂದ್ರ ರೈ ಬಳ್ಳಮಜಲು, ಚಂದ್ರಹಾಸ್ ರೈ ಡಿಂಬ್ರಿ, ಗಣೇಶ್ ರೈ ಬಳ್ಳಮಜಲು, ಬೈಂಕಿ ರೈ ಅಡ್ಕತ್ತಿಮಾರು, ಶಶಿಧರ್ ಕಿನ್ನಿಮಜಲು, ನವೀನ್ ರೈ ಬಳ್ಳಮಜಲು, ಕುಸುಮಾ ಮಾಪಾಲ, ಸಂಕಪ್ಪ ಕುರಿಯ, ಪುಷ್ಪರಾಜ್ ರೈ ಕುರಿಯ ಏಳ್ಳಾಡುಗುತ್ತು, ಜಯಶೀಲ ರೈ ಕುರಿಯ ಏಳ್ಳಾಡುಗುತ್ತು, ಡಾ. ಸಂಕಪ್ಪ ರೈ ಬೂಡಿಯಾರ್, ಬಿ.ರಾಧಾಕೃಷ್ಣ ರೈ, ದಿನೇಶ್ ಬೋಳಂತಿಮಾರು, ಸುಂದರ ಬೊಳಂತಿಮಾರು, ಆನಂದ ರೈ ಡಿಂಬ್ರಿ, ನಾರಾಯಣ ರೈ ಬಳ್ಳಮಜಲು, ಉಸ್ಮಾನ್, ಯಾಕುಬ್ ಕುರಿಯ, ಬಾಲಕೃಷ್ಣ ಗೌಡ ಪರೆಂಕಿಲ, ವಿನಯ ರೈ ಬಳ್ಳಮಜಲು, ಸೀತಾರಾಮ ರೈ ಬಳ್ಳಮಜಲು, ದಿವಾಕರ್ ರೈ ಬಳ್ಳಮಜಲು ಸಹಿತ ನೂರಾರು ಮಂದಿ ಉಪಸ್ಥಿತರಿದ್ದರು

About The Author

Leave a Reply