July 31, 2026
IMG-20260731-WA0002

ಸರ್ವೆಜನಃ‌ ಸುಖಿನೋಭವಂತು ಸಮಾಜ ಸೇವೆಯೇ ನಮ್ಮ ಉಸಿರು ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಸೇವೆಗಾಗಿ‌ ಸಂಭಾಷಣೆ ಎಂಬ ಕಲ್ಪನೆಯ ಮೂಲಕ ಆರಂಭಗೊಂಡ ವೀರಕೇಸರಿ ಬೆಳ್ತಂಗಡಿ ಸಂಘಟನೆ ಕಳೆದ 10 ವರ್ಷ 2 ತಿಂಗಳುಗಳಲ್ಲಿ 210 ಸೇವಾಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿತು….

ನೊಂದ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಯಶಸ್ವಿ 10 ನೇ ವರ್ಷದ ಪಯಣದಲ್ಲಿ 6 ಕುಟುಂಬಗಳಿಗೆ ನೆರವಾಗುವ ಮೂಲಕ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ
ಉತ್ಸಾಹವಿದ್ದರೆ, ಏನನ್ನಾದರೂ ಸಮಾಜಕ್ಕೆ ಮಾಡಬೇಕು ಎಂಬುವ ಹಂಬಲವಿದ್ದರೆ ಒಂದು ವೇದಿಕೆ ಬೇಕು ಹಾಗೆ ಅದು ಹಲವಾರು ತರುಣರ ಮನಸೆಳೆಯಬೇಕು ವೇದಿಕೆ ಬಳಿಸೇರಿದ ತರುಣರ ಹೃದಯ ಪರಿಪೂರ್ಣವಾಗಿರಬೇಕು ಆಗಮಾತ್ರ ಗೊಂದಲ,ಅಡೆತಡೆಗಳಿಲ್ಲದೆ ಅದರ ಯಶಸ್ಸು ಸಾದ್ಯ.

ಅಂದು ಅಡಿಗರು ಆಡಿದ ಮಾತು ಕಟ್ಟುವೆವು ನಾವು ಹೊಸದು ನಾಡೊಂದನ್ನ ರಸದ ಬೀಡೊಂದನ್ನ ಬಿಸಿ ನೆತ್ತರು ಉಕ್ಕುಕ್ಕಿ ಹರಿಯುವ ಮುನ್ನ ಕಟ್ಟುವೆವು ನಾವು ಹೊಸದು ನಾಡೊಂದನ್ನು ರಸದ ಬೀಡೊಂದನ್ನು ಎಂಬ ಮಾತಿನಂತೆ ನವ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿದಂತ ಎಲ್ಲಾ ಕಾರ್ಯಕರ್ತ ಬಂಧುಗಳಿಗೆ ಧನ್ಯವಾದ ಸಮರ್ಪಿಸುತ್ತಾ.

205ನೇ ಸೇವಾಯೋಜನೆ‌ಯಾಗಿ ಬಂಟ್ವಾಳ ತಾಲೂಕಿನ ಕುಂದಡ್ಕ ಶೆಡ್ಡುಮನೆ ನಿವಾಸಿ ಬಾಬು ಬಂಗೇರ ಇವರ ಪುತ್ರ ಜೀವನ್ ಕೆ.ಎಸ್ ಇವರು ದ್ವಿತೀಯ ಪಿಯುಸಿ ಮುಗಿಸಿದ್ದು ಮುಂದಿನ ವಿದ್ಯಾಭ್ಯಾಸಕ್ಕಾಗಿ 10,000 ರೂಗಳನ್ನು ಹಸ್ತಾಂತರಿಸಲಾಯಿತು.

206ನೇ ಸೇವಾಯೋಜನೆ‌ಯಾಗಿ ಉಳ್ಳಾಲ ತಾಲೂಕಿನ ಕೈರಂಗಳ ಗ್ರಾಮದ ಪುಣ್ಯಕೋಟಿ ನಗರ ನಿವಾಸಿ ಪಲ್ಲವಿ ಪ್ರಥಮ ವರ್ಷದ ಸ್ನಾತಕೋತ್ತರ ಪದವಿಯನ್ನು ಮಾಡುತಿದ್ದು ಇವರ ಮುಂದಿನ ವಿದ್ಯಾಭ್ಯಾಸಕ್ಕಾಗಿ 10,000 ರೂಗಳನ್ನು ಹಸ್ತಾಂತರಿಸಲಾಯಿತು.

207ನೇ ಸೇವಾಯೋಜನೆ‌ಯಾಗಿ ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಕೊಡಲೂರು ನಿವಾಸಿ ಅನಿತಾ ಇವರ ಪತಿ ಗಣೇಶ್ ಇವರು ಹೃದಯ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗಾಗಿ 10,000 ರೂಗಳನ್ನು ಹಸ್ತಾಂತರಿಸಲಾಯಿತು.

208ನೇ ಸೇವಾಯೋಜನೆ‌ಯಾಗಿ ಪಾವೂರು ಇನೋಳಿ ಮಾವೂರ್ ನಿವಾಸಿ ಪ್ರತೀಕ್ಷಾ ನಿವಾಸಿ ಪ್ರಥಮ‌ ವರ್ಷದ ಇಂಜಿನಿಯರಿಂಗ್ ಪದವಿಯನ್ನು ಮಾಡುತಿದ್ದು ಇವರ ವಿದ್ಯಾಭ್ಯಾಸದ ಶುಲ್ಕಕ್ಕಾಗಿ 10,000 ರೂಗಳನ್ನು ಹಸ್ತಾಂತರಿಸಲಾಯಿತು

209ನೇ ಸೇವಾಯೋಜನೆ‌‌ಯಾಗಿ ಮಂಗಳೂರು ತಾಲೂಕಿನ ಕುಂಪಲ ಸುರಕ್ಷಾನಗರ ನಿವಾಸಿ ಪ್ರಥ್ವಿಶ್ ಇವರು ದ್ವೀತಿಯ ಪಿಯುಸಿಯನ್ನು ಮುಗಿಸಿದ್ದು ಮುಂದಿನ ವಿದ್ಯಾಭ್ಯಾಸಕ್ಕಾಗಿ 10,000 ರೂಗಳನ್ನು ಹಸ್ತಾಂತರಿಸಲಾಯಿತು.

210ನೇ ಸೇವಾಯೋಜನೆ‌ಯಾಗಿ ತಾಲೂಕಿನ ಮೇಲಂತಬೆಟ್ಟು, ಮುಂಡೂರು ನಿವಾಸಿ ಪ್ರಣಮ್ ಇವರು ದ್ವಿತೀಯ ಪಿಯುಸಿಯನ್ನು ಪೂರ್ಣಗೊಳಿಸಿದ್ದು ಮುಂದಿನ ವಿದ್ಯಾಭ್ಯಾಸಕ್ಕಾಗಿ 10,000 ರೂಗಳನ್ನು ಹಸ್ತಾಂತರಿಸಲಾಯಿತು

ಈ ಕಾರ್ಯಕ್ರಮ 28:07:2026 ರಂದ್ದು ಸ್ವಾಮಿ ಕೊರಗಜ್ಜ ಸನ್ನಿಧಿ ಕಂಬಳ ಪದವು ಮಂಗಳೂರಲ್ಲಿ ನಡೆಯಿತು

ಈ ಸಂಧರ್ಭದಲ್ಲಿ ಶ್ರೀಧರ್ ಶೆಟ್ಟಿ ಕಂಬಳ ಪದವು ಉದ್ಯಮಿ ಹಾಗೂ ಧಾರ್ಮಿಕ ಮುಂಖಡರು, ಶ್ರೀ ರಾಕೇಶ್ ಶೆಟ್ಟಿ ಲಯನ್ಸ್ ಕಬ್ಲ್ ಮಾಜಿ ಅಧ್ಯಕ್ಷರು ಕಾವೂರು, ಶ್ರಿ ಪ್ರಜ್ವಲ್ ಕುಮಾರ್
ವೀರಕೇಸರಿ ಬೆಳ್ತಂಗಡಿ ಸದಸ್ಯರು, ಶ್ರೀಗಣೇಶ್ ಯಶಸ್ವಿನಿ ಇಂಡಲ್ ಶೀಟ್ ಕಂಬಳ ಪದವು ಇದರ ಮಾಲಿಕರು ,
ಶ್ರೀ ಪ್ರಸಾದ್ ಭಂಗ ಭುವಿ ಹೊಟೇಲ್ ಮಾಲಿಕರು ಕಂಬಳ ಪದವು
ಶ್ರೀಸತೀಶ್ ಶೆಟ್ಟಿ ವಿರಕೇಸರಿ ಬೆಳ್ತಂಗಡಿ ಸಂಚಾಲಕರು
ಶ್ರೀ ಪದ್ಮನಾಭ ಪೂಜಾರಿ ವೀರಕೇಸರಿ ಬೆಳ್ತಂಗಡಿ ಸಂಘಟಕರು.
ಶ್ರೀ ಪ್ರವೀಣ್ ಇನೋಳಿ ವಿರಕೇಸರಿ ಬೆಳ್ತಂಗಡಿ ಸದಸ್ಯರು
ಹಾಗೂ ವೀರಕೇಸರಿ ಸಂಘಟನ ಸದಸ್ಯರು ಭಾಗವಹಿಸಿದರು.

ಈ ಸೇವಾಯೋಜನೆಯೊಂದಿಗೆ ನಮ್ಮ ತಂಡವು ಯಶಸ್ವಿ 206ಸೇವಾಯೋಜನೆ‌ಗಳನ್ನು ಪೂರೈಸಿದ್ದು ಈ ತಿಂಗಳ ಮಾಸಿಕ ಸೇವಾಯೋಜನೆಗಳಿಗೆ 60,000 ರೂಪಾಯಿಗಳನ್ನು ವಿನಿಯೋಗಿಸಲಾಗಿದೆ.

About The Author

Leave a Reply