

ಅಗಸ್ಟ್ 15 ರಂದು ಧ್ವಜಾರೋಹಣದಿಂದ ವಿನಾಯಿತಿ ಕೋರಿ ಸಚಿವ ಜಮೀರ್ ಅಹ್ಮದ್ ಪತ್ರ ಬರೆದಿದ್ದರು. ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ವ್ಯಾಪಕವಾಗಿ ಟೀಕೆ ವ್ಯಕ್ತವಾಗುತ್ತಿದ್ದು, ಜಮೀರ್ ಅಹ್ಮದ್ ಬರೆದ ಪತ್ರಕ್ಕೆ ಸಚಿವ ಯುಟಿ ಖಾದರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಜಮೀರ್ ನಷ್ಟು ದೇಶಪ್ರೇಮ ಬಹುಶಃ ಬಿಜೆಪಿಯವರಿಗೂ ಇಲ್ಲ. ಜಮೀರ್ ಎಲ್ಲಾ ವರ್ಗದ ಜೊತೆ ಸೇರುವ ಮನೋಭಾವವಿದೆ. ಅವರ ದೇಶದ ಪ್ರೇಮ ಪ್ರಶ್ನೆಸುವ ನೈತಿಕತೆ ಯಾವ ಬಿಜೆಪಿ ನಾಯಕರಿಗೂ ಇಲ್ಲ ಎಂದು ಸಚಿವ ಯುಟಿ ಖಾದರ್ ಹೇಳಿಕೆ ನೀಡಿದರು.
ಈ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ ಕಿಡಿ ಕಾರಿದ್ದಾರೆ. ಜಮೀರ್ ದೇಶದ್ರೋಹಿ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಇದಕ್ಕಿಂತ ಘಣಂಧಾರಿ ಕೆಲಸ ಮಂತ್ರಿಗೆ ಏನಿದೆ? ಕಾರು ಸರ್ಕಾರದ್ದು, ಉಳಿದುಕೊಳ್ಳೋಕೆ ಸರ್ಕಾರ ವ್ಯವಸ್ಥೆ ಮಾಡುತ್ತದೆ, ಸ್ವಾತಂತ್ರ್ಯ ತಂದು ಕೊಟ್ಟಾಗ ಎಲ್ಲರೂ ಜೈಲಿಗೆ ಹೋದರು. ಪ್ರಾಣ ಕೊಟ್ಟರು ತಮ್ಮ ಇಡೀ ಮನೆ ಆಸ್ತಿ ಎಲ್ಲಾ ಹೋದರು ಕೂಡ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾರತ್ ಮಾತಾ ಕಿ ಜೈ ಒಂದೇ ಮಾತರಂ ಅಂತ ತಮ್ಮ ಪ್ರಾಣತ್ಯಾಗೆ ಮಾಡಿದರು. ಆದರೆ ಇಲ್ಲಿ ಒಬ್ಬ ಮಂತ್ರಿಗೆ ಸ್ವತಂತ್ರ ದಿನಾಚರಣೆಯಲ್ಲಿ ಭಾಗವಹಿಸುಕು ಪುರುಸೊತ್ತು ಇಲ್ಲ ಅಂತ ಅಂದ್ರೆ ಇಂಥವರೆಲ್ಲ ಇಟ್ಟುಕೊಂಡು ಡಿಕೆ ಶಿವಕುಮಾರ್ ಮಂತ್ರಿ ಮಾಡೋಕೆ ಹೋಗಿದ್ದಾರೆ ಇದು ದೇಶಕ್ಕೆ ಮಾಡಿದಂತಹ ಅಗೌರವ ಎಂದು ಕಿಡಿ ಕಾರಿದರು.
ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಕೂಡ ವಿರೋಧ ವ್ಯಕ್ತಪಡಿಸಿದ್ದು, ವಿಜಯನಗರ ಜಿಲ್ಲೆ ನಗರ ಜಿಲ್ಲೆಯ ಉಸ್ತುವಾರಿ ನನಗೆ ಜವಾಬ್ದಾರಿ ಬೇಡ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಲ್ಲಿ ಹೋಗಿಲ್ಲ ಪಕ್ಷದ ಸಂಘಟನೆ ಮಾಡಬೇಕು ಉಪಚುನಾವಣೆ ಎದುರಿಸಬೇಕು ಹಾಗಾಗಿ ನನಗೆ ಜವಾಬ್ದಾರಿ ಬೇಡ ಅಂತ ಹೇಳಿದ್ದಾರೆ. ನಾನು ಜಮೀರ್ ಅಹ್ಮದ್ ಅವರಿಗೆ ಕೇಳಲು ಬಯಸುತ್ತೇನೆ ನಾನು ಪಕ್ಷ ಸಂಘಟನೆ ಮಾಡಬೇಕು ಉಪ ಚುನಾವಣೆಗಳನ್ನು ಎದುರಿಸಬೇಕು, ಮಂತ್ರಿ ಗಿರಿನೇ ಬೇಡ ಅಂತ ಹೇಳಿದರೆ ನಾನು ಅದನ್ನು ಸ್ವಾಗತ ಮಾಡುತ್ತೇನೆ.

ಆದರೆ ಪ್ರಾಫಿಟ್ ಎಬಿಲಿಟಿ ಬೇಕು ಆದ್ರೆ ಅಕೌಂಟ ಎಬಿಲಿಟಿ ಬೇಡ ಆದರೆ ಹೇಗೆ? ತ್ರಿವರ್ಣ ಧ್ವಜ ಹಾರಿಸುವುದು ನಿಮ್ಮ ಕರ್ತವ್ಯವಾಗಿದೆ ಜನಪ್ರತಿನಿಧಿಗೆ ಶಾಸಕರಿಗೆ ಮಂತ್ರಿಗಳಿಗೆ ಅದು ಒಂದು ಕರ್ತವ್ಯ ಇದು ಒಂದು ಆಯ್ಕೆ ಅಲ್ಲ ಇದನ್ನು ಜಮೀರ್ ಅಹ್ಮದ್ ಅರ್ಥಮಾಡಿಕೊಳ್ಳಬೇಕು. ಈ ಒಂದು ಪತ್ರ ಬರೆದಿದ್ದೀರಿ ತ್ರಿವರ್ಣ ಧ್ವಜಕ್ಕೆ ಆಗೌರವ ತೋರಿದ್ದೀರಿ ಎಂದು ಆಕ್ರೋಶ ಹೊರಹಾಕಿದರು.






