September 6, 2026
WhatsApp Image 2026-09-05 at 8.43.26 PM (1)

ಬಂಟ್ವಾಳ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆ. 5ರ ಸಂಜೆ ಸಜೀಪದಿಂದ ಹೊರಟ ಶ್ರೀಕೃಷ್ಣನ ಭವ್ಯ ಶೋಭಾಯಾತ್ರೆ ಕೋಟೆಕಣಿ ಮೂಲಕ ಕೊಳಕೆ ಜಂಕ್ಷನ್ ಬಳಿ ಸಾಗಿದ ಸಂದರ್ಭದಲ್ಲಿ ಸಜೀಪ ಮೂಡ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಸದಸ್ಯ ಹಾಗೂ ಉದ್ಯಮಿ ಹಮೀದ್ ಅವರ ನೇತೃತ್ವದಲ್ಲಿ ಯುವಕರ ತಂಡ ಶೋಭಾಯಾತ್ರೆಯಲ್ಲಿ ಸಾಗಿದ ಭಕ್ತಾದಿಗಳಿಗೆ ಮಜ್ಜಿಗೆ ಹಾಗೂ ಲಡ್ಡು ವಿತರಿಸಿ ಸೌಹಾರ್ದ ಮೆರೆದರು.

ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಆತ್ಮೀಯವಾಗಿ ಉಪಾಹಾರ ವಿತರಿಸುವ ಮೂಲಕ ಧರ್ಮಸೌಹಾರ್ದತೆ, ಸಹಬಾಳ್ವೆ ಹಾಗೂ ಪರಸ್ಪರ ಪ್ರೀತಿಯ ಸಂದೇಶವನ್ನು ಸಾರಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀ ಯಶವಂತ ದೇರಾಜೆ, ಇಂತಹ ಸೌಹಾರ್ದದ ವಾತಾವರಣ ನಿರಂತರವಾಗಿ ಮುಂದುವರಿಯಲಿ ಹಾಗೂ ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಬಾಳ್ವೆ ಮತ್ತಷ್ಟು ಗಟ್ಟಿಯಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಶರೀಫ್, ಮಲಿಕ್, ಹಾರಿಸ್, ಬಶೀರ್ ಮುಯಿಯದ್ದಿನ್, ಅರ್ಫಾಝ್, ತಾಸಿಫ್, ಅರ್ಷಾದ್, ಅಶ್ಫಾಕ್, ನೌಫಲ್, ಹಸೈನಾರ್, ಆರ್ಶಿದ್, ಬಾತಿಸ್, ಕಲಂದರ್ ಬಾಬಾ, ಪೊಡಿಯಕ, ಕರೀಂ, ಹೈದ್ರಾಬಾದ್, ಸಾಬಿತ್,ಅಮೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

Leave a Reply