ಜಪಾನ್ ಏರ್ಲೈನ್ಸ್ ವಿಮಾನವು ಸಣ್ಣ ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿ ಉರಿದಿದೆ. ಇನ್ನು ಏರ್ಲೈನ್ಸ್ ವಿಮಾನದಲ್ಲಿದ್ದ ಎಲ್ಲಾ 379 ಪ್ರಯಾಣಿಕರು ಮತ್ತು ಸಿಬ್ಬಂದಿ ಪಾರಾಗಿದ್ದಾರೆ. ಆದ್ರೆ, ಡಿಕ್ಕಿ ಹೊಡೆದ ಕೋಸ್ಟ್ ಗಾರ್ಡ್ ವಿಮಾನದಲ್ಲಿದ್ದ ಆರು ಸಿಬ್ಬಂದಿಗಳ ಪೈಕಿ ಐವರು ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ.
ರಕ್ಷಣಾ ಸಿಬ್ಬಂದಿ ಬೆಂಕಿಯನ್ನ ನಿಯಂತ್ರಿಸಲು ಪ್ರಯತ್ನಿಸುತ್ತಿರುವಾಗ ವಿಮಾನವು ಬೆಂಕಿಯಲ್ಲಿ ಸ್ಫೋಟಗೊಳ್ಳುವುದನ್ನು ಸಾರ್ವಜನಿಕ ಪ್ರಸಾರಕ ಎನ್‌ಎಚ್ಕೆ ತೋರಿಸಿದೆ.
ಇನ್ನು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಹಾನಿಯನ್ನ ತ್ವರಿತವಾಗಿ ನಿರ್ಣಯಿಸಲು ಸಮನ್ವಯ ಸಾಧಿಸಲು ಸಂಬಂಧಿತ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.