ಮಂಗಳೂರು: ಸಮುದ್ರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಾಳ ಹಾಕಿ ಮೀನು ಹಿಡಿದರು..! ಮಂಗಳೂರಿನ ಉಳ್ಳಾಲ ಬೀಚ್ ನಲ್ಲಿ ಫಿಶಿಂಗ್ ನಲ್ಲಿ ತೊಡಗಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಸ್ಪೀಕರ್ ಯು.ಟಿ. ಖಾದರ್ ಅವರ ಸಹೋದರ ಯು.ಟಿ. ಇಫ್ತಿಕಾರ್ ಸಾಥ್ ನೀಡಿದರು. ಡಿಕೆಶಿ ತಮ್ಮ ತಂಡದೊಂದಿಗೆ ಇಂದು ಬೆಳಗ್ಗೆ ಉಳ್ಳಾಲ ಬೀಚ್ ಗೆ ಭೇಟಿ ನೀಡಿದ್ದರು.