Visitors have accessed this post 943 times.

ಬಂಟ್ವಾಳ : ಪತಿ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ ಪತ್ನಿ..!

Visitors have accessed this post 943 times.

ಬಂಟ್ವಾಳ : ಕೌಟುಂಬಿಕ ಕಲಹದ ಹಿನ್ನಲೆ ಪತ್ನಿ ತನ್ನ ಗೆಳೆಯನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಲು ಕಾರು ಹತ್ತಿಸಿದ ಘಟನೆಯು ಬಂಟ್ವಾಳ ಪಾಣಿಮಂಗಳೂರಿನ ಮೆಲ್ಕಾರಿನಲ್ಲಿ ನಡೆದಿದ್ದು, ಇದೀಗ ಪತಿಯು ಎದೆನೋವಿ ನಿಂದಾಗಿ ಆಸ್ಪತ್ರೆ ಸೇರಿದ್ದಾರೆ.

ಜನವರಿ 23ರಂದು ಈ ಘಟನೆ ನಡೆದಿದ್ದು ಪತ್ರಿಕೆಯೊಂದರಲ್ಲಿ ಛಾಯಾಗ್ರಾಹಕರಾಗಿರುವಂತಹ ಕಿಶೋರ್ ಕುಮಾರ್ ಬೋಳಾರ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಕಿಶೋರ್ ಅವರ ಪತ್ನಿ ಶಿಕ್ಷಕಿ ಶುಭಾ ಮತ್ತು ಶಿಕ್ಷಕ ಶಿವಪ್ರಸಾದ್‌ ಶೆಟ್ಟಿ ಎಂಬವರ ಮೇಲೆ ದೂರು ದಾಖಲಾಗಿದೆ. ಕಿಶೋರ್ ಕುಮಾರ್ ಬೋಳಾರ್ ನೀಡಿರುವ ದೂರಿನ ಪ್ರಕಾರ ಶುಭಾ ರವರನ್ನು 2008 ರಲ್ಲಿ ಮದುವೆಯಾಗಿ 12 ವರ್ಷದ ಹೆಣ್ಣು ಮಗಳಿದ್ದು, ಪಿರ್ಯಾದಿದಾರರು ಪ್ರಜಾವಾಣಿ ಪತ್ರಿಕೆಯಲ್ಲಿ ಛಾಯಾ ಚಿತ್ರ ವರದಿಗಾರನಾಗಿಯೂ, ಅವರ ಪತ್ನಿ ಸರ್ಕಾರಿ ಶಾಲಾ ಅಧ್ಯಾಪಕಿಯಾಗಿ ಕೆಲಸ ಮಾಡಿಕೊಂಡಿದ್ದಾರೆ.

ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಎಂಬಲ್ಲಿ ಸಾರಾ ಆರ್ಕೆಡ್ ಎಂಬ ವಸತಿ ಗೃಹದಲ್ಲಿ ವಾಸವಾಗಿದ್ದರು. ಈ ನಡುವೆ ಕಿಶೋರ್ ಅವರ ಪತ್ನಿ ಶುಭಾ ರವರ ಮೊಬೈಲಿಗೆ ಸಹದ್ಯೋಗಿಯಾಗಿರುವ 2 ನೇ ಆರೋಪಿ ಶಿವಪ್ರಸಾದ್ ಶೆಟ್ಟಿ ಎಂಬಾತನು “ಹಾಯ್ ಮುದ್ದು” ಎಂಬ ಸಂದೇಶವನ್ನು ಕಳುಹಿಸಿದ್ದನ್ನು ಕಿಶೋರ್ ಕುಮಾರ್ ನೋಡಿ ತಕಾರರು ತೆಗೆದಿದ್ದರು. ಇದು ಕೌಟುಂಬಿಕ ತಕಾರರು ಪ್ರಾರಂಭವಾಗಿದ್ದು, ದಿನಾಂಕ: 13.05.2021 ರಂದು ಶುಭಾ ಅವರು ತನ್ನ ತವರು ಮನೆಗೆ ಮಗಳೊಂದಿಗೆ ಹೋಗಿರುತ್ತಾರೆ. ಆ ಬಳಿಕ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇಧನ ಕೋರಿ ದಾವೆ ಸಲ್ಲಿಸಿದ್ದಾರೆ. ಈ ನಡುವೆ ಸದ್ರಿ ದಾವೆಗೆ ಕಿಶೋರ್ ಹೈಕೋರ್ಟ್ ನಿಂದ ತಡೆಯಾಜ್ಞೆ ಪಡೆದಿರುತ್ತಾರೆ. ತದನಂತರ 1 ನೇ ಆರೋಪಿತೆಯು ಪಿರ್ಯಾದಿದಾರರ ವಾಸ ಇರುವ ಮೆಲ್ಕಾರ್ ನಲ್ಲಿರುವ ಮನೆಯನ್ನು ತೆರವು ಗೊಳಿಸಲು ದಾವೆ ಹೊಡಿದ್ದು, ವಿಚಾರಣೆಯಲ್ಲಿರುತ್ತದೆ. ಕಿಶೋರ್ ಕುಮಾರ್ ಜ.23ರಂದು ಮೆಲ್ಕಾರಿನಲ್ಲಿರುವ ತನ್ನ ಮನೆಗೆ ಬಂದ ವೇಳೆ ಆರೋಪಿಗಳಾದ ಶುಭಾ, ಶಿವಪ್ರಸಾದ್ ಶೆಟ್ಟಿ ಹಾಗೂ ಇತರ ಇಬ್ಬರು ರೌಡಿಗಳೊಂದಿಗೆ ಬಂದು ಮನೆ ಖಾಲಿ ಮಾಡುವಂತೆ ಧಮ್ಮಿ ಹಾಕಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇದೇ ವೇಳೆ ಆರೋಪಿ ಶಿವಪ್ರಸಾದ್ ಶೆಟ್ಟಿಯು ತಾನು ಶುಭಾಳನ್ನು ರಿಜಿಸ್ಟರ್ ಮದುವೆಯಾಗಿರುವುದಾಗಿ ಕೂಡ ಹೇಳಿಕೊಂಡಿದ್ದಾನೆ. ಈ ವೇಳೆ ಶುಭಾ ಮನೆಯ ಕೀಲಿಗೈ ತೆಗೆಯುತ್ತಿರುವಂತೆ ಭಾಸವಾದಾಗ ಕಿಶೋರ್ ತಡೆಯಲು ಮುಂದಾದ ವೇಳೆ ಅವರಿಗೆ ಹಲ್ಲೆ ನಡೆಸಲಾಗಿದೆ. ಈ ಘಟನೆ ಬಳಿಕ ಆರೋಪಿಗಳು ಇನ್ನೋವಾ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ ವೇಳೆ ಕಿಶೋರ್ ತಡೆದಾಗ ಶಿವಪ್ರಸಾದ್, ಕಿಶೋರ್ ಅವರ ಮೇಲೆ ವಾಹನ ಹತ್ತಿಸಿ ಕೊಲೆಗೆ ಯತ್ನಿಸಿದ್ದಾನೆ. ಹಲ್ಲೆ ಮತ್ತು ಕಾರು ಢಿಕ್ಕಿಯ ಆಘಾತದಿಂದ ಕಿಶೋರ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮರಳಿದ್ದರು. ಮತ್ತೆ ಅವರಿಗೆ ಎದೆನೋವು ಕಾಣಿಸಿಕೊಂಡು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಂಟ್ವಾಳ ಠಾಣೆಯಲ್ಲಿ ಕಿಶೋರ್ ಅವರ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *