ಬೆಂಗಳೂರು: ವಿದೇಶದಲ್ಲಿ ತಲೆ ಮರೆಸಿಕೊಳ್ಳುವುದಕ್ಕೆ ಸಹಾಯ ಮಾಡಿದ ಆರೋಪದಡಿಯಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣರ ಗರ್ಲ್‍ಫ್ರೆಂಡ್‍ಗೆ ಎಸ್‍ಐಟಿ ನೋಟಿಸ್ ಕೊಟ್ಟಿದೆ ಎನ್ನಲಾಗಿದೆ.
ವಿವಾದದ ಬಳಿಕ ಪ್ರಜಲ್ವ್ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದು, ಹಲವು ಬಾರಿ ನೋಟಿಸ್ ನೀಡಿದ್ದರು ಕೂಡ ಅವರು ವಿಚಾರಣೆಗೆ ಬಂದಿರಲಿಲ್ಲ, ಇದು ತನಿಖಾಧೀಕಾರಿಗಳಿಗೆ ದೊಡ್ಡ ತಲೆನೋವಾಗಿತ್ತು, ಈ ನಡುವೆ ಪ್ರಜ್ವಲ್‍ಗೆ ವಿದೇಶದಲ್ಲಿರುವಾಗ ಸಹಾಯ ಮಾಡಿರೋ ಬಗ್ಗೆ ಎಸ್‌ಐಟಿ ಅಧಿಕಾರಿಗಳ ಬಳಿ ಮಹತ್ವದ ದಾಖಲೆಗಳು ಇದ್ದು, ಈ ನಿಟ್ಟಿನಲ್ಲಿ ಆಕೆಗೆ ನೋಟಿಸ್ ನೀಡಿ ವಿವರ ವನ್ನು ಕೋರಿದ್ದಾರೆ ಎನ್ನಲಾಗಿದೆ.
ನಂಬರ್ಲಹ ಸುದ್ದಿ ಮೂಲಗಳ ಪ್ರಕಾರ, ಆಕೆ ಹಣದ ಸಹಾಯವನ್ನು ಮಾಡಿರುವ ಶಂಕೆ ಕೂಡ ಇದೆ.