Visitors have accessed this post 673 times.
ಕರ್ನಾಟಕದಲ್ಲಿ ಗೋಧ್ರಾ ದುರಂತ ಆಗಬಹುದು ಅಂಥ MLC ʻಬಿ.ಕೆ ಹರಿಪ್ರಸಾದ್ʼ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಅವರು ಈ ಬಗ್ಗೆ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದ್ದು, ಕರ್ನಾಟಕದಲ್ಲಿ ಅಹಿತಕರ ಚಟುವಟಿಕೆಗೆ ಪ್ರಚೋದನೆ ನೀಡಲಾಗುತ್ತಿದೆ ಅಂತ ಹೇಳಿದ ಅವರು , ಈ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ ಅಂತ ಹೇಳಿದರು
ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ವೇಳೆ ಗೋಧ್ರಾ ರೀತಿ ಮತ್ತೊಮ್ಮೆ ಏನಾದ್ರೂ ಅಗಬಹುದು ಅಂತ ಹೇಳಿರುವ ಅವರು ರಾಮಮಂದಿರವನ್ನು ಧಾರ್ಮಿಕ ಗುರುಗಳು ಉದ್ಘಾಟನೆ ಮಾಡುತ್ತಿದ್ದರೆ ನಾವು ಆಹ್ವಾನ ಇಲ್ಲದೇ ಹೋಗುತ್ತಿದ್ದೇವು. ಆದರೆ ಇದು ರಾಜಕೀಯ ಕಾರ್ಯಕ್ರಮವಾಗಿರವು ಕಾರಣದಿಂಧ ಅಲ್ಲಿಗೆ ಹೋಗುವುದಕ್ಕೆ ಸಾಧ್ಯವಿಲ್ಲ ಅಂತ ಹೇಳಿದರು. ಈ ಬಗ್ಗೆ ಬಿಜೆಪಿ ನಾಯಕರುಗಳು ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನಾಯಕರು ಹಾಗೂ ಹರಿಪ್ರಸಾದ್ ಅವರು ಟಿವಿಯಲ್ಲಿಕಾಣಿಸಿಕೊಳ್ಳುವುದಕ್ಕೆ ಈ ರೀತಿ ಹೇಳಿಕೆ ನೀಡುತ್ತಿದ್ದು, ಇದು ರಾಮ ವಿರೋಧ ಹೇಳಿಕೆಯಾಗಿದ್ದು, ಇದಕ್ಕೆ ಬೆಲೆ ನೀಡುವ ಅವಶ್ಯಕತೆ ಇಲ್ಲ ಅಂತ ಹೇಳಿದ್ದಾರೆ.