
ಡಿಸೆಂಟ್ ಪ್ರೆಂಡ್ಸ್ ನಾರ್ಶ ಹಾಗೂ ಇಲೆವೆನ್ ಸ್ಟಾರ್ ಕೆ.ಪಿ.ಬೈಲ್ ಇದರ ಜಂಟಿ ಆಶ್ರಯದಲ್ಲಿ NPL ಸೀಸನ್-3 ನಾರ್ಶ ಪ್ರೀಮಿಯರ್ ಲೀಗ್ ಮಾದರಿಯ ಆಹ್ವಾನಿತ ತಂಡಗಳ ಕ್ರಿಕೇಟ್ ಪಂದ್ಯಾಟ ಜನವರಿ 14-01-2024 ಆದಿತ್ಯವಾರ ನಾರ್ಶದ ಶಾಲಾ ನಜಕ್ರೀಡಾಂಗಣದಲ್ಲಿ ನಡೆಯಲಿದೆ.



ಪಂದ್ಯಾಕೂಟದ ಅದ್ಯಕ್ಷತೆಯನ್ನು ಅಳಿಕೆ ಶಾಲೆಯ ಅಧ್ಯಾಪಕರೂ ಸ್ಥಳೀಯರಾದ ಗೋಪಲ್ ರಾವ್ ವಹಿಸಲಿದ್ದಾರೆ.ಮಾಜಿ ಸಚಿವರಾದ ಶ್ರೀ. ಬಿ.ರಮನಾಥ ರೈ ಅವರು ಉದ್ಘಾಟಿಸುವ ಮೂಲಕ ಚಾಲನೆ ನೀಡಲಿದ್ದಾರೆ.ಟ್ರೋಪಿ ಅನಾವರಣವನ್ನು ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರೂ ಪಂಚಾಯತ್ ರಾಜ್ ಜಿಲ್ಲಾದ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರು ನಿರ್ವಹಿಸಲಿದ್ದಾರೆ.ಸಮವಸ್ತ್ರ ಬಿಡುಗಡೆಯನ್ನು ಕೊಳ್ನಾಡು ಗ್ರಾಮ ಪಂಚಾಯತ್ ಅದ್ಯಕ್ಷರಾದ ಅಶ್ರಪ್ ಕೆ.ಸಾಲೆತ್ತೂರು ಹಾಗೂ ಗುತ್ತಿಗೆದಾರ ಬಾಲಕೃಷ್ಣ ಸೆರ್ಕಳ ಜಂಟಿಯಾಗಿ ಬಿಡುಗಡೆಗೊಳಿಸಲಿದ್ದಾರೆ.ಪ್ರಸ್ತಾವಿಕವಾಗಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎಂ.ಎಸ್.ಮಹಮ್ಮದ್ ಮಾತಾಡಲಿದ್ದಾರೆ.ಅಲ್ಲದೆ ಈ ಸಂದರ್ಭದಲ್ಲಿ ವಿಶೇಷ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನ ಕಾರ್ಯಕ್ರಮ ಎರ್ಪಡಿಸಲಾಗಿದೆ.ಪ್ರಮುಖರಾದ ದಾರ್ಮಿಕ,ಸಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಉದ್ಯಮಿಗಳು ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಹಾಜಿ.ಎನ್.ಸುಲೈಮಾನ್ ಸಿಂಗಾರಿ,ಹಾರೀಸ್ ಕಲ್ಪನೆ ದೈಹಿಕ ಶಿಕ್ಷಕರು ನೆಲ್ಯಾಡಿ,ಸ್ಥಳೀಯ ಮಾಜಿ ಪ್ರತಿಬಾಂತ ಆಟಗಾರ ವಿಶ್ವನಾಥ ರೈ ನಾರ್ಶ ಸನ್ಮಾನಿಸಲ್ಪಡಲಿದ್ದಾರೆ.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ.ಅದ್ಯಕ್ಷರಾದ ಯಾಕೂಬ್ ನಾರ್ಶ, ಪ್ರಶಸ್ತಿ ವಿತರಣೆಯನ್ನು ಯೂತ್ ಕಾಂಗ್ರೆಸ್ ಅದ್ಯಕ್ಷರಾದ ಇಬ್ರಾಹಿಂ ನವಾಝ್,ದೈಹಿಕ ಶಿಕ್ಷಕರಾದ ಅಬ್ದುಲ್ ರಪೀಕ್ ಮಾಸ್ಟರ್,ಸಿಂಗಾರಿ ಸಮೂಹ ಸಂಸ್ಥೆಗಳ ಪಾಲುದಾರರಾದ ಇಕ್ಬಾಲ್ ಸಿಂಗಾರಿ ಪಾಲ್ಗೊಲಲ್ಲಿದ್ದಾರೆ.ಅಲ್ಲದೆ ರಾಜಕೀಯ ಮುಖಂಡರು, ಉದ್ಯಮಿಗಳು,ಸಮಾಜಿಕ ನೇತಾರರು ಸೇರಿದಂತೆ ಸ್ಥಳೀಯ ಗಣ್ಯರು ಈ ಸಮಾರಂಭದಲ್ಲಿ ಬಾಗಿಯಾಗಲಿದ್ದಾರೆ ಎಂದು ಡಿಸೆಂಟ್ ಪ್ರೆಂಡ್ಸ್ ನಾರ್ಶ ಇದರ ಅದ್ಯಕ್ಷರಾದ ಅಬ್ದುಲ್ ಖಾದರ್ ನಾರ್ಶ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ..