ಡಿಪ್ಲೋಮಾ, ಪದವೀಧರರೇ ಗಮನಿಸಿ : ʻಯುವನಿಧಿʼ ನೋಂದಣಿ, ಭತ್ಯೆ ಪಡೆಯಲು ಹೀಗೆ ಮಾಡಿ

ಬೆಂಗಳೂರು : ರಾಜ್ಯ ಸರ್ಕಾರವು ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿಗೆ ಚಾಲನೆ ನೀಡಿದ್ದು, ಅರ್ಹ ಫಲಾನುಭವಿಗಳು ನೋಂದಣಿ ಮಾಡಿಕೊಂಡು ಭತ್ಯೆ ಪಡೆದುಕೊಳ್ಳುವಂತೆ ಸೂಚನೆ ನೀಡಿದೆ.

ರಾಜ್ಯ ಸರ್ಕಾರವು ಯುವನಿಧಿ ಯೋಜನೆಯಡಿ ಪದವೀದಧರರಿಗೆ ರೂ. 3000/- ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ.1500/- ನಿರುದ್ಯೋಗ ಭತ್ಯೆಯನ್ನು 2 ವರ್ಷದವರೆಗೆ ನೀಡುತ್ತಿದೆ.

ಯುವನಿಧಿ ಯೋಜನೆಗೆ ಅಭ್ಯರ್ಥಿಗಳು ಸೇವಾ ಸಿಂಧು ಜಾಲತಾಣ https://sevasindhugs.karnataka.gov.in/ ನಲ್ಲಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ಎಸ್‌ ಎಸ್‌ ಎಲ್‌ ಸಿ, ಪಿಯುಸಿ, ಪದವಿ, ಡಿಪ್ಲೋಮಾ ಪ್ರಮಾಣಪತ್ರ, ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಅಭ್ಯರ್ಥಿಯ ಬ್ಯಾಂಕ್‌ ಪಾಸ್‌ ಪುಸ್ತಕವನ್ನು ಹೊಂದಿರಬೇಕು. ನೇರ ನಗದು ವರ್ಗಾವಣೆ (Direct Transfer) ಸ್ವೀಕರಿಸಲು ಆಧಾರ್ ಸಂಖ್ಯೆಯೊಂದಿಗೆ (Aadhar-seeded) ಬ್ಯಾಂಕ್ ಖಾತೆಯನ್ನು ನೀವು ಹೊಂದಿರಬೇಕು.

Aadhar-linked mobile number ಅಂದರೆ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಅನ್ನು ನೀಡಬೇಕು.

Leave a Reply