ತುಳುನಾಡ ರಕ್ಷಣಾ ವೇದಿಕೆ ವೈದ್ಯರ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಡಾ ರವೀಂದ್ರ ಆಯ್ಕೆ

ಕಳೆದ 50 ವರ್ಷಗಳಿಂದ ಆಯುರ್ವೇದ ವೈದ್ಯರು ಹಲವಾರು ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತಿದ್ದು ಆಯುರ್ವೇದ ವೈದ್ಯರು
ತುಂಬಾ ಕಷ್ಟದಲ್ಲಿ ಸೇವೆ ಮಾಡುವ ಪರಿಸ್ಥಿತಿಯಲ್ಲಿದ್ದಾರೆ. ಅಂತಹ ಸಂದರ್ಭದಲ್ಲಿ ಧೈರ್ಯದಿಂದ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವೈದ್ಯರ ಪರವಾಗಿ ಹೋರಾಟ ನಡೆಸಲು ಸಮರ್ಥ ನಾಯಕನಾಗಿ ಡಾ. ರವೀಂದ್ರ ರವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪುರವರು ಆಯ್ಕೆ ಮಾಡಿರುತ್ತಾರೆ. ಇವರು ತಮ್ಮ ಅವಧಿಯಲ್ಲಿ ವೈದ್ಯರ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಯಶಸ್ವಿಯಾಗಲಿ.ಎಂದು ತುಳುನಾಡ ರಕ್ಷಣಾ ವೇದಿಕೆ , ವಕೀಲರ ಘಟಕ, ಮಹಿಳಾ ಘಟಕ ,
ಕಾರ್ಮಿಕ ಘಟಕ, ಯುವ ಘಟಕ, ಭ್ರಷ್ಟಾಚಾರ ವಿರೋಧಿ ಮತ್ತು ಮಾನವ ಹಕ್ಕುಗಳ ಘಟಕ, ಆಂಬುಲೆನ್ಸ್ ಘಟಕ, ಅಟೋ ಘಟಕ ಶುಭಹಾರೈಸಿರುತ್ತಾರೆ.

Leave a Reply

Your email address will not be published. Required fields are marked *