ಪುತ್ತೂರು: ಹಿಂದೂ ಮುಖಂಡ ಅವಿನಾಶ್‍ ಗೆ ಗಡಿಪಾರು ಆದೇಶ..!

ಪುತ್ತೂರು: ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಪುರುಷರಕಟ್ಟೆ ನಿವಾಸಿ ಹಿಂದೂ ಮುಖಂಡ ಅವಿನಾಶ್ ಅವರಿಗೆ ದ.ಕ.ಜಿಲ್ಲಾ ವ್ಯಾಪ್ತಿಯಿಂದ ಬೀದರ್ ಜಿಲ್ಲಾ ವ್ಯಾಪ್ತಿಯ ಶಾಂತಪುರ ಪೊಲೀಸ್ ಠಾಣಾ ಸರಹದ್ದಿಗೆ ಗಡಿಪಾರಿಗೆ ಉಪ್ಪಿನಂಗಡಿ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಆದೇಶ ಮಾಡುವ ಕುರಿತು ಪುತ್ತೂರು ಸಹಾಯಕ ಆಯುಕ್ತರ ಕಚೇರಿ ನ್ಯಾಯಾಲಯದಲ್ಲಿ ಜ.24 ರಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆ ನಡೆಯಲಿದೆ.

ಕರ್ನಾಟಕ ಪೊಲೀಸ್ ಅಧಿನಿಯಮ-1963 ರ ಕಲಂ :55 ಪ್ರಕಾರ ಗಡಿಪಾರಿಗೆ ಆದೇಶಿಸಲಾಗಿದೆ.

ವಿಚಾರಣೆಗೆ ಸಂಬಂಧಿಸಿ ಅವಿನಾಶ್ ಸ್ವತಃ ಅಥವಾ ವಕೀಲರ ಮೂಲಕ ವಿಚಾರಣೆಗೆ ಹಾಜರಾಗಿ ವಾದಿಸಬಹುದು. ತಪ್ಪಿದಲ್ಲಿ ಅವರಿಗೆ ಆಸಕ್ತಿ ಇಲ್ಲವೆಂದು ಪರಿಗಣಿಸಿ ಲಭ್ಯವಿರುವ ಮಾಹಿತಿ ಆಧಾರದಲ್ಲಿ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ನೋಟೀಸ್‍ ನಲ್ಲಿ ತಿಳಿಸಲಾಗಿದೆ.

Leave a Reply