Visitors have accessed this post 312 times.
ಕಾಲೇಜಿಗೆ ಹೋಗು ಎಂದು ಅಣ್ಣನೊಬ್ಬ ತಂಗಿಗೆ ಬೈದಿದ್ದರಿಂದ ತಂಗಿ ಮನನೊಂದು ಮನೆಯ ಬಳಿ ಇದ್ದ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಈ ವೇಳೆ ಅಣ್ಣ ಕೂಡ ತೆಂಗಿನ ರಕ್ಷಿಸಲು ಹೋಗಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟ್ಟಪಳ್ಳಿ ಗ್ರಾಮದಲ್ಲಿ ನಡೆದಿದೆ.
ಪಟಪಳ್ಳಿ ಗ್ರಾಮದಲ್ಲಿ ಬಾವಿಗೆ ಬಿದ್ದು ಅಣ್ಣ ತಂಗಿ ಸಾವನ್ನಪ್ಪಿದ್ದು, ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟ್ಟಪಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಾವಿಗೆ ಹಾರಿದ್ದ ತಂಗಿಯ ರಕ್ಷಣೆಗೆ ಹೋದ ಅಣ್ಣ ಕೂಡ ಈ ವೇಳೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯನ್ನ ನಂದಿನಿ (18) ಹಾಗೂ ರಕ್ಷಿಸಲು ತೆರಳಿದ್ದ ಆಕೆಯ ಅಣ್ಣ ಸಂದೀಪ್ (21) ಮೃತ ದುರ್ದೈವಿಗಳಾಗಿದ್ದಾರೆ.
ಕಾಲೇಜಿಗೆ ಹೋಗುವಂತೆ ಅಣ್ಣ ಸಂದೀಪ್ ತಂಗಿಗೆ ಬೈದು ಬುದ್ಧಿ ಹೇಳಿದ್ದ ಇದರಿಂದ ಮನನೊಂದು ಓಡಿಹೋಗಿ ತಂಗಿ ನಂದಿನಿ ಬಾವಿಗೆ ಹಾರಿದ್ದಾಳೆ ಎಂದು ಹೇಳಲಾಗುತ್ತಿದೆ. ಇದೆ ವೇಳೆ ತಂಗಿಯನ್ನು ರಕ್ಷಿಸಲು ಹೋಗಿದ್ದ ಅಣ್ಣ ಸಂದೀಪ್ ಕೂಡ ಬಾವಿಗೆ ಹಾರಿದ್ದಾನೆ.ಮನೆ ಬಳಿ ಇದ್ದ ಬಾವಿಗೆ ಬಿದ್ದು ಅಣ್ಣ ತಂಗಿ ಇಬ್ಬರೂ ಕೂಡ ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.