Visitors have accessed this post 536 times.

ರಾಜ್ಯಸಭಾ ತೆರವಾದ 4 ಸ್ಥಾನದಲ್ಲಿ ಒಂದು ಸ್ಥಾನ ಮಾಜಿ ಸಚಿವ ಶ್ರೀ ಬಿ ರಮಾನಾಥ ರೈ ಯವರಿಗೆ ಕೊಡಬೇಕು

Visitors have accessed this post 536 times.

ತನ್ನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದರೂ ರೈಯವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಪಪ್ರಚಾರದ ಮೂಲಕ ವ್ಯವಸ್ಥಿತವಾಗಿ ಸೋಲಿಸಲಾಗಿತ್ತು. ಬಂಟ್ವಾಳದಲ್ಲಿ ಹಿಂದೆ ಎಂಟು ಬಾರಿ ಸ್ಪರ್ಧಿಸಿದ್ಧ ರೈಯವರು ಆರು ಸಲ ಗೆದ್ಧಿದ್ಧರು‌ .

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ಧರೂ ರೈಯವರು ಸುಮ್ಮನೆ ಕೂತವರಲ್ಲ. ನಾನು ನೋಡಿದ ಪ್ರಕಾರ ಗೆದ್ಧ ಶಾಸಕರ ಕಚೇರಿಗೆ ಬರುವುದಕ್ಕಿಂತಲೂ ಹೆಚ್ಚಿನ ಜನರು ತಮ್ಮ ಅಹವಾಲು ಹೊತ್ತುಕೊಂಡು ರೈಯವರ ಮನೆ ಮುಂದೆ ಬರುತ್ತಿದ್ಧರು.ಹೀಗೆ ಬಂದ ಜನರಲ್ಲಿ ರೈಯವರು,”ನೀವು ಯಾವ ಕ್ಷೇತ್ರದವರು,ನನಗೆ ಓಟು ಹಾಕಿದವರಾ?” ಎಂದು ಸಲವೂ ಕೇಳಿದವರಲ್ಲ.

ಬಂದವರಲ್ಲಿ ಯಾರಿಗಾದರೂ ಸರ್ಕಾರಿ ಅಧಿಕಾರಿಗಳ ಸಹಾಯ ಬೇಕಿದ್ಧರೆ ಜನರ ಮುಂದೆಯೇ ಮೊಬೈಲ್ ಲೌಡ್ ಸ್ಪೀಕರ್ ಹಾಕಿ ಮಾತನಾಡುತ್ತಿದ್ಧರು.”ನೀವು ಹೋಗಿ ನಾನು ಆಮೇಲೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ” ಎನ್ನುವ ರಾಜಕಾರಣಿಗಳಿಗಿಂತ ರೈ ಎಂದೂ ಭಿನ್ನವಾಗಿ ಗುರುತಿಸಿಕೊಂಡವರು. ಅಧಿಕಾರದಲ್ಲಿ ಇದ್ಧರೂ ಇರದಿದ್ಧರೂ ಸರ್ಕಾರಿ ಅಧಿಕಾರಿಗಳ ಜೊತೆ ಅತ್ಯಂತ ಸೌಜನ್ಯದಿಂದ ಮಾತನಾಡುತ್ತಿದ್ಧ ರೈಯವರ‌ ಮಾತಿಗೂ ಇಂದಿಗೂ ಅಧಿಕಾರಿ ವಲಯದಲ್ಲಿ ದೊಡ್ಡ ತೂಕವಿದೆ.

ರೈಯವರು ಸುದೀರ್ಘ ರಾಜಕೀಯ ಬದುಕಿನಲ್ಲಿ ಅತ್ಯಂತ ಪ್ರಾಮಾಣಿಕರೂ,ಪಾರದರ್ಶಕ ವ್ಯಕ್ತಿತ್ವದವರೂ ಆಗಿ ಗಮನ ಸೆಳೆದವರು.ಇದುವರೆಗೆ ಒಂದೇ ಒಂದು ಭ್ರಷ್ಟಾಚಾರ ಆರೋಪ ಇಲ್ಲದೆ ರಾಜಕೀಯ ಬದುಕು ನಡೆಸಿದ ರೈಯವರು ಕರುನಾಡ ರಾಜಕಾರಣದಲ್ಲಿ ಅತ್ಯಂತ ಮಾದರಿಯೋಗ್ಯ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ.

ಒಂದು ಸಲ ಶಾಸಕನಾಗಿ ಆಯ್ಕೆಯಾದರೂ ಸಾವಿರಾರು ಕೋಟಿ ಆಸ್ತಿ ಸಂಪಾದಿಸುವ ರಾಜಕಾರಣಿಗಳನ್ನು‌ ನಾಡು ನೋಡಿದೆ.ಆದರೆ ನಾಲ್ಕು ದಶಕಗಳಿಗಿಂತಲೂ ಅಧಿಕ ಕಾಲ ಸಕ್ರಿಯ ರಾಜಕೀಯದಲ್ಲಿ ಇದ್ಧ ರೈಯವರಿಗೆ ಬೆಂಗಳೂರಿನಲ್ಲಿ ಇದುವರೆಗೆ ಒಂದು ಸ್ವಂತ ಮನೆ ಮಾಡಲಾಗಲಿಲ್ಲ!! ಮೊನ್ನೆಯ ಚುನಾವಣೆಯ ಖರ್ಚಿಗೆ ಹಣವಿಲ್ಲದೆ ರೈಯವರು ಬ್ಯಾಂಕಿನಿಂದ ಸಾಲ ತೆಗೆದುಕೊಂಡಿದ್ಧರಂತೆ!!

ಸ್ವಜನ ಪಕ್ಷಪಾತ, ಸ್ವಾರ್ಥ,ಹಣ‌ಮಾಡುವ ದಂಧೆಯೆಂದೇ ಪರಿಗಣಿಸಲ್ಪಟ್ಟ ರಾಜಕಾರಣದಲ್ಲಿ ಮೌಲ್ಯಾಧಾರಿತ,ನೈತಿಕ ರಾಜಕಾರಣ ಮಾಡಿದ ಬೆರಳೆಣಿಕೆಯ ರಾಜಕಾರಣಿಗಳಲ್ಲಿ ರೈಯವರು ಓರ್ವರು ಎಂಬುದು ನಮ್ಮ ಕರಾವಳಿಗರ ಹೆಮ್ಮೆ.

ಈ ಎರಡು ಬಾರಿಯ ಸತತ ಸೋಲು ಖಂಡಿತಾ ರೈಯವರ ತಪ್ಪಿನಿಂದ ಆದ ಫಲಿತಾಂಶವಲ್ಲ. ಕರಾವಳಿ ಅಲ್ಲದೆ ಬೇರೆಲ್ಲೇ ರೈಯಂತವರು ಇದ್ಧಿದ್ಧರೆ ಇಂದು 30-40 ಸಾವಿರ ಮತಗಳ ಅಂತರದಿಂದ ಜಯಿಸುತ್ತಿದ್ಧರು.ಆದರೆ ಕರಾವಳಿ ಈಗ ಕೋಮುವಾದದ ಪ್ರಯೋಗ ಶಾಲೆಯಾಗಿದೆ. ರೈಯವರು ಕನಸಿನಲ್ಲಿಯೂ ಯೋಚಿಸದ ಕೆಲಸ ಮಾಡಿದ್ಧಾರೆ ಎಂದರೆ ಇಂದು ಕಣ್ಣುಮುಚ್ಚಿ ನಂಬುವ ದೊಡ್ಡ ವರ್ಗವಿದೆ.

ರೈಯವರ ಸೋಲು ಸತ್ಯದ ಸೋಲು,ಅದು ಗುಣಾತ್ಮಕ ರಾಜಕಾರಣದ ಸೋಲು.ಖಂಡಿತಾ ಇಂತಹ ಸೋಲಿನೊಂದಿಗೆ ರೈಯವರಿಗೆ ಕರುನಾಡು ವಿದಾಯ ಹೇಳಬಾರದಿತ್ತು.ಕಾಲ ಇನ್ನೂ ಮಿಂಚಿಲ್ಲ.

ಕಾಂಗ್ರೆಸ್ಸಿನಲ್ಲಿಯೇ ರಾಜಕೀಯ ಜೀವನ ಪ್ರಾರಂಭಿಸಿ, ಕಳೆದ ನಾಲ್ಕು ದಶಕಗಳ ಕಾಲ ತಮ್ಮ ಪಕ್ಷಕ್ಕೆ ಒಂದೇ ಒಂದು ಕಪ್ಪು ಚುಕ್ಕೆ ತರದಂತೆ ರೈಯವರು ಜನಸೇವೆ ಮಾಡಿದ್ದಾರೆ. ರಮಾನಾಥ ರೈಯವರ ರಾಜಕೀಯ ಸಂಧ್ಯಾ ಕಾಲದಲ್ಲಿ ಕಾಂಗ್ರೆಸ್ ಗೆ ತನ್ನ ಪಕ್ಷದ ನಿಷ್ಠಾವಂತ ನಾಯಕನಿಗೆ ಗೌರಯುತ ಸ್ಥಾನಮಾನವಾದ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿ ಕರಾವಳಿ ಕಾಂಗ್ರೆಸ್ ಗೆ ಹೆಚ್ಚಿನ ಬಲ ನೀಡಬೇಕು.

ಜಿಲ್ಲೆಯಾಧ್ಯಂತ ಜನ ಬೆಂಬಲವಿದ್ಧ ರೈಯವರು ಸೋತ ಬಳಿಕವೂ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲಿಲ್ಲ. ಮಂಗಳೂರು ಲೋಕಸಭಾ ಆಕಾಂಕ್ಷಿಯಾಗಿದ್ಧರೂ ರೈವರಿಗೆ ಟಿಕೆಟ್ ಸಿಗವುದಿಲ್ಲ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೆ ರೈಯವರು ಜಿಲ್ಲೆಯಾದ್ಯಂತ ಓಡಾಡುತ್ತಾ ತಮ್ಮ ಸರ್ಕಾರದ ಸವಲತ್ತುಗಳು ಕಟ್ಟ ಕಡೆಯ ಪ್ರಜೆಗೂ ತಲುಪಬೇಕೆಂದು ಪ್ರಾಮಾಣಿಕವಾಗಿ ದುಡಿಯುತ್ತಿದ್ಧಾರೆ.ಕಾಂಗ್ರೆಸ್ ನಲ್ಲಿ ಬಹಳಷ್ಟು ನಾಯಕರು ಬರಬಹುದು,ಹೋಗಬಹುದು. ಆದರೆ ರಮಾನಾಥ ರೈಯಂತ ಪಾರದರ್ಶಕ ವ್ಯಕ್ತಿತ್ವ ಹೊಂದಿರುವವರ, ಪಕ್ಷದ ಬಗ್ಗೆ ತಮ್ಮ ವಯೋವೃದ್ಧ ವಯಸ್ಸಿನವರೆಗೂ ಪಕ್ಷ ನಿಷ್ಟೆ ಉಳಿಸಿಕೊಳ್ಳುವವರ ಸಂಖ್ಯೆ ಖಂಡಿತಾ ಜಾಸ್ತಿ ಇರಲಾರದು.

ದಯವಿಟ್ಟು ಕಾಂಗ್ರೆಸ್ ಹೈಕಮಾಂಡ್ ರಮಾನಾಥ ರೈಯವರಿಗೆ ರಾಜ್ಯಸಭಾ ಸದಸ್ಯ ಸ್ಥಾನ ಅಥವಾ ವಿಧಾನ ಪರಿಷತ್ ಸ್ಥಾನ ಕೊಡಬೇಕು. ಈ ಮೂಲಕ ಕಾಂಗ್ರೆಸ್ ನ್ನು ಕಟ್ಟಿ ಬೆಳೆಸಿದ ರೈಯವರಿಗೆ ಅರ್ಥಪೂರ್ಣ ಗೌರವ ಕೊಡಬೇಕು. ಎಂಬುದು ನಮ್ಮ ಬೇಡಿಕೆ.

ಶ್ರೀ ಬಿ ರಮಾನಾಥ ರೈ ಅಭಿಮಾನಿ ಬಳಗ ಸುಳ್ಯ ವಿಧಾನ ಸಭಾ ಕ್ಷೇತ್ರ

ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಮುಖ ಕಾಂಗ್ರೆಸ್ ಮುಖಂಡರಾದ

@ ಗೋಕುಲ್ ದಾಸ್ ಸುಳ್ಯ
@ ಭವಾನಿಶಂಕರ್ ಕಲ್ಮಡ್ಕ
@ ಚೇತನ್ ಕಜೆಗದ್ದೆ
@ ಶಶಿಧರ್ ಎಂ ಜೆ
@ ಸಚಿನ್ ರಾಜ್ ಶೆಟ್ಟಿ
@ ಮಹೇಶ್ ಕುಮಾರ್ ಕರಿಕ್ಕಳ
@ ರವೀಂದ್ರ ರುಧ್ರಪಾದ
@ ಬಾಲಕೃಷ್ಣ ಬಳ್ಳೇರಿ
@ ಪ್ರವೀಣ್ ಕುಮಾರ್ ಕೆಡಿಂಜಿ
@ ಶೋಭಿತ್ ನಾಯರ್ ಸುಬ್ರಮಣ್ಯ

Leave a Reply

Your email address will not be published. Required fields are marked *