January 16, 2026
WhatsApp Image 2024-01-30 at 5.52.42 PM

ಬದಿಯಡ್ಕ: ಯುವಕನ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಬದಿಯಡ್ಕದಲ್ಲಿ ನಡೆದಿದ್ದು  ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊಗ್ರಾಲ್ ಪುತ್ತೂರು ಕೋಟಕುನ್ನುವಿನ ಅನ್ವರ್ (24) ಎಂಬಾತನ ಸ್ನೇಹಿತ ಸಾಹಿಲ್ (21) ಯುವಕ ನನ್ನು ಪೊಲೀಸರು ಬಂಧಿಸಿದ್ದಾರೆ.

ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ ಹತ್ತನೇ ತರಗತಿ ವಿದ್ಯಾರ್ಥಿನಿ ಫಾತಿಮ್ಮತ್ ಮುನ್ಸಿಯಾ ರಿಲ್ವಾನ(15)ರ ಹರೆಯದ ಬಾಲಕಿಯ ಸಾವಿಗೆ ಸಂಬಂಧಿಸಿ ಈ ಇಬ್ಬರನ್ನು ಬಂಧಿಸಲಾಗಿದೆ. ಕಳೆದ ಮಂಗಳವಾರ ಸಂಜೆ ಮನೆಯೊಳಗೆ ವಿಷ ಸೇವಿಸಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದಳು. ಬಾಲಕಿಯನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ನಿನ್ನೆ ಮುಂಜಾನೆ ಮೃತಪಟ್ಟಿದ್ದಾಳೆ.

ಬಾಲಕಿ ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ ಬದಿಯಡ್ಕ ಪೊಲೀಸರು ಹಾಗೂ ಮೆಜಿಸ್ಟ್ರೇಟ್ ಬಾಲಕಿ ಯಿಂದ ಹೇಳಿಕೆ ದಾಖಲಿಸಿ ಕೊಂಡಿದ್ದರು. ಆರೋಪಿಗಳಿಂದ ನಿರಂತರ ಉಂಟಾದ ಉಪಟಳ ಹಾಗೂ ಬೆದರಿಕೆಯನ್ನು ಸಹಿಸಲಾಗದೆ ವಿಷ ಸೇವಿಸಿರುವುದಾಗಿ ಬಾಲಕಿ ಹೇಳಿದ್ದಳು. ಇದರಂತ ಪೋಕ್ಸ್ ಕೇಸು ದಾಖಲಿಸಿಕೊಂಡ ಈ ಇಬ್ಬರನ್ನು ಬಂಧಿಸಿದ್ದಾರೆ.

ಇದೇ ವೇಳೆ ಬಾಲಕಿಯನ್ನು ಆರೋಪಿಗಳು ಮಂಗಳೂರು ಸಹಿತ ವಿವಿಧ ಸ್ಥಳಗಳಿಗೆ ಕರೆದೊಯ್ದು ಹಾಗೂ ಕಾರಿನೊಳಗೆ ಕಿರುಕುಳ ನೀಡಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಕಿರುಕುಳ ಸಂದರ್ಭದಲ್ಲಿ ಕಾರು ಚಲಾಯಿಸಿದುದು ಸಾಹಿಲ್ ಆಗಿದ್ದಾನೆಂದೂ ತಿಳಿದುಬಂದಿದೆ.

ಬಾಲಕಿಯನ್ನು ಆರೋಪಿ ಅನ್ವರ್ ಸಾಮಾಜಿಕ ತಾಣದ ಮೂಲಕ ಪರಿಚಯಗೊಂಡಿದ್ದಾ ನೆನ್ನಲಾಗಿದೆ. ಬಳಿಕ ವಿವಿಧೆಡೆಗೆ ಕರೆದೊಯ್ದು ಕಿರುಕುಳ ನೀಡಿದ್ದು, ಈ ವಿಷಯ ಬಹಿರಂಗಪಡಿಸಿದರೆ ತಂದೆಯನ್ನು ಕೊಲ್ಲುವುದಾಗಿ ನೇರವಾಗಿಯೂ ಫೋನ್ ಮೂಲಕವೂ ಆರೋಪಿಗಳು ಬೆದರಿಕೆಯೊಡ್ಡಿರುವುದಾಗಿಯೂ ಬಾಲಕಿ ಪೊಲೀಸರಲ್ಲಿ ತಿಳಿಸಿದ್ದಾಳೆನ್ನಲಾಗಿದೆ. ಇದರಂತೆ ಪೋಕ್ಸ್‌ ಕಾಯ್ದೆ ಹಾಗೂ ಆತ್ಮಹತ್ಯೆ ಪ್ರೇರಣೆ ಆರೋಪದಂತೆ ಆರೋಪಿಗಳ ವಿದರುದ್ಧ ಕೇಸು ದಾಖಲಿಸಲಾಗಿದೆ.

About The Author

Leave a Reply