October 26, 2025
WhatsApp Image 2024-01-31 at 9.04.09 AM
ಉಡುಪಿ: ನಗರದಲ್ಲಿ ವಿದ್ಯಾರ್ಥಿಯೋರ್ವನಿಗೆ ತಂಡವೊಂದು ಹಲ್ಲೆ ನಡೆಸಿ ಚೂರಿಯಿಂದ ಇರಿದ ಘಟನೆ ಉಡುಪಿಯ ಎಂಜಿಎಂ ಮೈದಾನದಲ್ಲಿ ಸಂಭವಿಸಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿ ಎಂಜಿಎಂ ಮೈದಾನದಲ್ಲಿ ವಿದ್ಯಾರ್ಥಿಗೆ ಚೂರಿ ಇರಿತ ಬ್ರಹ್ಮಾವರದ ಹೇರೂರಿನ ಪ್ರತೀಕ್ (17) ಎಂದು ತಿಳಿದು ಬಂದಿದೆ.
ಈ ವಿದ್ಯಾರ್ಥಿ ಉಡುಪಿಯ ಕೋಚಿಂಗ್ ಸೆಂಟರ್‌ವೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಅಲ್ಲಿ ಸುಹಾಸ್ ಎಂಬಾತ ಪರಿಚಯವಾಗಿತ್ತು. ಪ್ರತೀಕ್ ಒಂದುವರೆ ತಿಂಗಳ ಹಿಂದೆ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿದ್ದರು. ಇದನ್ನು ನೋಡಿದ ಸುಹಾಸ್ ನು ಹೊಟ್ಟೆ ಕಿಚ್ಚಿನಿಂದ ನೀನು ಈ ಬೈಕ್ ನ್ನು ಕದ್ದಿದ್ದೀಯಾ ಎಂದು ಹಿಯಾಳಿಸಿದ್ದನೆ ಎನ್ನಲಾಗಿದೆ.
ಮಧ್ಯಾಹ್ನ ವೇಳೆ ಪ್ರತೀಕ್ ಅವರು, ಎಂಜಿಎಂ ಮೈದಾನಕ್ಕೆ ಹೋದಾಗ ಅಲ್ಲಿದ್ದ ಆರೋಪಿಗಳಾದ ಸುಹಾಸ್, ಮೋನೀಶ್‌, ತರುಣ್ ಹಾಗೂ ಇಬ್ಬರು ಅಪರಿಚಿತ ವ್ಯಕ್ತಿಗಳು ಸೇರಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿದ್ದಾರೆ. ಇನ್ನೋರ್ವ ಆರೋಪಿ ತರುಣ್ ಎಂಬಾತ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಪ್ರತೀಕ್ ಅವರ ಹೊಟ್ಟೆ ಹಾಗೂ ತೊಡೆಯ ಭಾಗಕ್ಕೆ ಇರಿದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರತೀಕ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About The Author

Leave a Reply