ಮಂಗಳೂರು: ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಡಾ. ಪಿ.ಎಲ್.ಧರ್ಮ ಅಧಿಕಾರ ಸ್ವೀಕಾರ

ಮಂಗಳೂರು: ಮಂಗಳೂರು ವಿಶ್ವವಿದ್ಯಾ ನಿಲಯದ ಕುಲಪತಿ ಹುದ್ದೆಗೆ ಮಂಗಳೂರು ವಿವಿಯ ಮಾಜಿ ಕುಲಸಚಿವ (ಪರೀಕ್ಷಾಂಗ), ರಾಜ್ಯ ಶಾಸ್ತ್ರ ಉಪನ್ಯಾ ಸಕ ಪ್ರೊ|ಪಿ.ಎಲ್.ಧರ್ಮ ಅವರನ್ನು ನೇಮಕಗೊಳಿಸಿ ಮಂಗಳವಾರ ರಾಜ್ಯಪಾಲರ ಸಚಿವಾಲಯ ಆದೇಶಿಸಿದೆ.

ನೂತನ ಕುಲಪತಿ ಪ್ರೊ. ಪಿ.ಎಲ್.ಧರ್ಮ ಅವರು ಮಂಗಳವಾರ ಸಂಜೆ ವಿವಿ ಪ್ರಭಾರ ಕುಲಪತಿ ಪ್ರೊ. ಜಯರಾಜ್ ಅಮೀನ್ ಅವರಿಂದ ಅಧಿಕಾರ ಸ್ವೀಕರಿಸಿದರು.4 ವರ್ಷಗಳಿಂದ ಮಂಗಳೂರು ವಿ.ವಿ. ಕುಲಪತಿಯಾಗಿದ್ದ ಪ್ರೊ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಕಳೆದ ವರ್ಷ ಜೂ.2ರಂದು ಸೇವಾ ನಿವೃತ್ತಿಯಾಗಿದ್ದರು.

ಆ ಬಳಿಕ ಕುಲಪತಿ ಹುದ್ದೆ ಖಾಲಿ ಇತ್ತು . ಜೂ.2ರಂದು “ಪ್ರಭಾರ ಕುಲಪತಿ’ಯಾಗಿ ಮಂಗಳೂರು ವಿ.ವಿ. ರಾಜ್ಯ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಕಲಾ ನಿಕಾಯದ ಡೀನ್ ಪ್ರೊ. ಜಯರಾಜ್ ಅಮೀನ್ ಅವರು ಅಧಿಕಾರದಲ್ಲಿದ್ದರು

Leave a Reply