February 23, 2026
WhatsApp Image 2024-03-07 at 2.26.20 PM

ಬಜಪೆ : ಖಾಸಗಿ ಶಾಲಾ ಬಸ್ಸೊಂದು ಬ್ರೇಕ್ ವೈಪಲ್ಯಗೊಂಡು ಅಪಘಾತಕ್ಕಿಡಾದ ಘಟನೆ ಕೈಕಂಬ ಸಮೀಪದ ಕಾಜಿಲ ಎಂಬಲ್ಲಿ ನಡೆದಿದೆ. ಕೈಕಂಬದಿಂದ ಶಾಲಾ ವಿದ್ಯಾರ್ಥಿಗಳನ್ನು ಅಡ್ಡೂರು ಕಡೆಗೆ ಕೊಂಡೊಯುತ್ತಿದ್ದಾಗ ಬಸ್ ಕಾಜಿಲ ಇಳಿಜಾರು ಬಳಿ ಬರುತ್ತಿದ್ದಾಗ ಬ್ರೇಕ್ ವೈಫಲ್ಯಗೊಂಡು ಪಕ್ಕದ ಚರಂಡಿಗೆ ಬಸ್ ಇಳಿದಿದೆ. ಇಳಿಜಾರಿನಿಂದ ಕೂಡಿದ ರಸ್ತೆಯಲ್ಲಿ ಕಮರು ಕೂಡ ಇದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಘಟನೆಯಲ್ಲಿ ನಾಲ್ಕು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ. ಕ್ರೇನ್ ಮೂಲಕ ಬಸ್ ನ್ನು ಮೇಲಕ್ಕೆತ್ತಲಾಗಿದೆ.

About The Author

Leave a Reply