Visitors have accessed this post 1158 times.
ಮುಲ್ಕಿ: ಖತರ್‌ನಿಂದ ಉಮ್ರಾ ಯಾತ್ರೆ ಹೊರಟಿದ್ದ ಕಾರು ಅಪಘಾತಕ್ಕೀಡಾಗಿ ಮೃತಪಟ್ಟಿದ್ದ ಹಳೆಯಂಗಡಿಯ ಒಂದೇ ಕುಟುಂಬದ ಮೂವರ ಅಂತಿಮ ಸಂಸ್ಕಾರ ರಿಯಾದ್ ಮತ್ತು ತಾಯಿಫ್ ನಡುವಿನ ಉಮ್ಮುಲ್ ಹಮ್ಮಾಮ್ ಕಿಂಗ್ ಖಾಲಿದ್ ಗ್ರ್ಯಾಂಡ್ ಮಸೀದಿಯ ದಫನ ಭೂಮಿಯಲ್ಲಿ ನೆರವೇರಿತು. ಮೃತಪಟ್ಟ ಹಿಬಾ ಅವರ ತಂದೆ ಮುಹಮ್ಮದ್ ಶಮೀಮ್, ಚಿಕ್ಕಪ್ಪ ಲತೀಫ್, ರಮೀಝ್ ರ ತಂದೆ ತಾಯಿ ಹಾಗೂ ಕುಟುಂಬ ಸದಸ್ಯರು ಭಾಗವಹಿಸಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಾ.20ರಂದು ರಾತ್ರಿ ರಿಯಾದ್-ತಾಯಿಫ್ ಹೆದ್ದಾರಿಯಲ್ಲಿ ಸಂಭವಿಸಿದ ಈ ರಸ್ತೆ ಅಪಘಾತದಲ್ಲಿ ಮೂಲತಃ ಹಳೆಯಂಗಡಿ 10ನೇ ತೋಕೂರು ನಿವಾಸಿ ಹಿಬಾ (29), ಅವರ ಪತಿ ಮುಂಬೈ ಮೂಲದ ಮುಹಮ್ಮದ್ ರಮೀಝ್ (34) ಮತ್ತು ಪುತ್ರಿ ರಾಹ (3 ತಿಂಗಳು) ಮೃತಪಟ್ಟಿದ್ದಾರೆ. ಹಿಬಾ ಅವರ ಹಿರಿಯ ಪುತ್ರ 3 ವರ್ಷದ ಹಾರೂಶ್ (3) ತಲೆಗೆ ಗಂಭೀರ ಗಾಯಗಳಾಗಿವೆ. ಅದೇ ರೀತಿ ಅವರ ಚಿಕ್ಕಪ್ಪ ಲತೀಫ್‌ರ ಪುತ್ರಿ ಫಾತಿಮಾ (19) ಸ್ಥಿತಿ ಕೂಡಾ ಚಿಂತಾಜನಕವಾಗಿದೆ. ಇವರಿಬ್ಬರನ್ನು ರಿಯಾದ್ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಇವರು ಇತ್ತೀಚೆಗಷ್ಟೇ ಹಳೆಯಂಗಡಿಯಿಂದ ಖತರ್‌ನಲ್ಲಿರುವ ತಮ್ಮ ದೊಡ್ಡಪ್ಪನ ಮನೆಗೆ ತೆರಳಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.