Visitors have accessed this post 1565 times.
ಮಂಗಳೂರು : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ್ದ ಸಂಬಂಧ ಪಟ್ಟಂತೆ ಮೃತರ ಮನೆಗಳಿಗೆ ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಭೇಟಿ ನೀಡಿ ಸಾಂತ್ವನ ಹೇಳಿದರು.
ಬಳಿಕ ದೂರವಾಣಿ ಕರೆ ಮೂಲಕ ಮುಖ್ಯಮಂತ್ರಿ ಜೋತೆಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಮೋಸದ ಜಾಲಕ್ಕೆ ಜನರು ಬಲಿಪಶು ಮಾಡಲಾಗುತ್ತಿದೆ ತಕ್ಷಣ ಕಾನೂನು ಕ್ರಮಕೈಗೊಳ್ಳಬೇಕು ಚುನಾವಣೆ ಇದ್ದರು ಮುಖ್ಯಮಂತ್ರಿ ವಿಶೇಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ರಶೀದ್ ಕುಂದಡ್ಕ ಉಪಸ್ಥಿತರಿದ್ದರು