Visitors have accessed this post 462 times.
ಬೆಂಗಳೂರು : ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಸೇವನೆ ಆರೋಪ ಎದುರಿಸುತ್ತಿರುವ ತೆಲುಗು ಖ್ಯಾತ ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹೇಮಾ ಅವರು ತಾವು ರೇವ್ ಪಾರ್ಟಿಯಲ್ಲಿ ಭಾಗಿಯಾಗಿಲ್ಲವೆಂದು ಹೈಡ್ರಾಮಾ ಮಾಡಿದ್ದರು.. ಇದರ ಬೆನ್ನಲ್ಲೇ ತನಖೆ ನಡೆಸಿದ ಸಿಸಿಬಿ ಪೊಲೀಸರು ನಟಿ ಡ್ರಗ್ಸ್ ಸೇವನೆ ಮಾಡಿರುವುದು ಖಚಿತಪಡಿಸಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಎರಡು ನೋಟಿಸ್ ನೀಡಿದ್ದರೂ ಹಾಜರಾಗಿರಲಿಲ್ಲ.. ಹಾಗಾಗಿ ಇಂದು ವಿಚಾರಣೆಗೆ ಬಂದಿದ್ದ, ವೇಳೆ ವಿಚಾರಣೆ ನಡೆಸಿ, ಬಳಿಕ ಹೇಮಾ ಅವರನ್ನು ವಶಕ್ಕೆ ಪಡೆದಿದ್ದಾರೆ.