Visitors have accessed this post 481 times.

ಬೈಕ್‌-ಟೆಂಪೋ ನಡುವಿನ ಅಪಘಾತದಲ್ಲಿ ಯುವ ಉದ್ಯಮಿ ಮೃತ್ಯು..!

Visitors have accessed this post 481 times.

 ಕಾರ್ಕಳದ ಮಿಯ್ನಾರು ಬಳಿಯ ನಲ್ಲೂರು ಬಸದಿ ತಿರುವಿನಲ್ಲಿ ಸಂಭವಿಸಿದ ಬೈಕ್‌-ಟೆಂಪೋ ನಡುವಿನ ಅಪಘಾತದಲ್ಲಿ ಯುವ ಉದ್ಯಮಿಯೊಬ್ಬರು‌ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತಪಟ್ಟ ಉದ್ಯಮಿ ಕಾಶಿನಾಥ್‌ (38) ಎಂದು ತಿಳಿಯಲಾಗಿದೆ.
ಕಲ್ಯಾದ ಹಾಳೆಕಟ್ಟೆಯಲ್ಲಿ ಸಲೂನ್‌ ಅಂಗಡಿ ಹೊಂದಿದ್ದ ಅವರು ರಾತ್ರಿ ಕೆಲಸ ಮುಗಿಸಿ  ಬೈಕಿನಲ್ಲಿ ಮನೆಗೆ ತೆರಳುತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬಸದಿ ತಿರುವಿನಲ್ಲಿ ಮನೆ ಕಡೆಗೆ ಬೈಕ್‌ ತಿರುಗಿಸುವಾಗ ಎದುರಿನಿಂದ ವೇಗವಾಗಿ ಬಂದ ಟೆಂಪೋವೊಂದು ಢಿಕ್ಕಿ ಹೊಡೆದಿದೆ ಎಂದು ಎನ್ನಲಾಗಿದೆ.
ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *