Visitors have accessed this post 220 times.
ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ದಕ್ಷಿಣ ಕನ್ನಡ ಮತ್ತು ಸ.ಪ.ಪೂ ಕಾಲೇಜು ನಾರ್ಶಮೈದಾನ ಇದರ ವತಿಯಿಂದ 2024-25ನೇ ಸಾಲಿನ ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾಕೂಟದ ಪೂರ್ವಭಾವಿ ಸಭೆಯು ಸ.ಪ.ಪೂ ಕಾಲೇಜು ನಾರ್ಶಮೈದಾನದಲ್ಲಿ ನಡೆಯಿತು.
ದಕ್ಷಿಣಕನ್ನಡ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ ಅವರು ಅಧ್ಯಕ್ಷತೆ ವಹಿಸಿ ತಾಲೂಕಿನ ಪ್ರತಿಯೊಂದು ಕಾಲೇಜಿನವರು ತಮ್ಮ ಸಂಸ್ಥೆಗಳಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವಂತೆ ಸೂಚಿಸಿ ಅದಕ್ಕೆ ತನ್ನ ಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶ್ರಫ್ ಸಾಲೆತ್ತೂರು ಹಾಗೂ ಉಪಾಧ್ಯಕ್ಷೆ ಅಸ್ಮಾ ಹಸೈನಾರ್ ತಾಳಿತ್ತನೂಜಿ ಮಾತಾಡಿ ಈ ಹಿಂದೆ ನಾರ್ಶ ಕಾಲೇಜು ಮೈದಾನದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ನಡೆಸಿ ಯಶಸ್ವಿಯಾಗಿದ್ದು ನಮ್ಮ ಕಾಲೇಜಿಗೆ ಹೆಸರು ತಂದುಕೊಟ್ಟಿದೆ ಎಂದ ಇವರು ಗ್ರಾಮ ಪಂಚಾಯಿತಿ ವತಿಯಿಂದ ಕ್ರೀಡಾಕೂಟಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಕಾಲೇಜುಗಳ ಪ್ರಾಂಶುಪಾಲರು,ದೈಹಿಕ ಶಿಕ್ಷಣ ಉಪನ್ಯಾಸಕರು,ಉಪನ್ಯಾಸಕರು ಉಪಸ್ಥಿತರಿದ್ದರು. ಉಪನಿರ್ದೇಶಕರ ಸೂಚನೆಯಂತೆ ತಾಲೂಕು ಮಟ್ಟದಲ್ಲಿ ನಡೆಯುವ ಪಂದ್ಯಾಟಗಳನ್ನು ವಿವಿಧ ಕಾಲೇಜುಗಳಿಗೆ ಹಂಚಿಕೆ ಮಾಡಲಾಯಿತು. ಕಾಲೇಜು ಪ್ರಾಂಶುಪಾಲೆ ಶ್ರೀಮತಿ ರೀಟಾ ಡಿಸೋಜಾ ಸ್ವಾಗತಿಸಿದರು.ತಾಲೂಕು ಕ್ರೀಡಾ ಸಂಯೋಜಕ ಶ್ರೀ ವಸಂತ ಗೌಡ ಪ್ರಸ್ತಾವನೆಗೈದರು.ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ರಫೀಕ್ ವಂದಿಸಿದರು.ದೈಹಿಕ ಶಿಕ್ಷಣ ಉಪನ್ಯಾಸಕ ಸಾಯಿರಾಮ್ ನಾಯಕ್ ನಿರ್ವಹಿಸಿದರು.