Visitors have accessed this post 1267 times.
ಕೋಲಾರ : ಪ್ರೀತಿಸಿ ಮದುವೆಯಾದ ನವಜೋಡಿ ಕೆಲವೇ ಫಸ್ಟ್ ನೈಟ್ ಗೂ ಮುಂಚೆನೆ ಮಚ್ಚಿನಿಂದ ಹೊಡೆದಾಡಿಕೊಂಡು ನವ ವಧು ವರ ಸಾವನ್ನಪ್ಪಿದ್ದಾರೆ. ಘಟನೆ ಕೆಜಿಎಫ್ ತಾಲ್ಲೂಕು ಚಂಬರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಬೆಳಗ್ಗೆ ವಧು ಲಿಖಿತ ಶ್ರೀ ಹಾಗೂ ನವೀನ್ ಮದುವೆಯಾಗಿತ್ತು. ಮದುವೆಯಾದ ಕೆಲ ಗಂಟೆಗಳ ನಂತರ ವಧು, ವರರು ಮನೆಯ ಕೊಠಡಿಗೆ ಹೋಗಿದ್ದಾರೆ. ಕೊಠಡಿ ಹೋದ ಕೆಲ ಹೊತ್ತಿಗೆ ನವೀನ್ ಹಾಗೂ ಲಿಖಿತ ಹೊಡೆದಾಡಿಕೊಂಡಿದ್ದಾರೆ. ಕೊಠಡಿಯಲ್ಲಿ ಇದ್ದ ಮಚ್ಚಿನಿಂದ ನವ ವಧು, ವರರು ಕಿತ್ತಾಡಿದ್ದಾರೆ.
ಹುಡುಗಿ ಲಿಖಿತಶ್ರೀ ಆಂಧ್ರದ ಬೈನಪಲ್ಲಿ ಗ್ರಾಮದವರು. ನವೀನ್ ಕೆಜಿಎಫ್ ತಾಲ್ಲೂಕು ಚಂಬರಸನಹಳ್ಳಿ ನಿವಾಸಿ. ನವೀನ್ ಹಾಗೂ ಲಿಖಿತ ಇಬ್ಬರು ಪ್ರೀತಿಸಿ ಎರಡೂ ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದರು. ಆದರೆ ಮದುವೆಯಾದ ನಂತರ ಗಲಾಟೆಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಕೆಜಿಎಫ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಲಿಖಿತ, ನವೀನ್ ಸಾವನ್ನಪ್ಪಿದ್ದಾರೆ.