Visitors have accessed this post 272 times.

ಮಂಗಳೂರು : ಪಿ.ಜಿ ಯಿಂದ ಲಕ್ಷಾಂತರ ಮೌಲ್ಯದ ಸೊತ್ತುಗಳು ಕಳವು

Visitors have accessed this post 272 times.

ಮಂಗಳೂರು: ನಗರದ ಪಿಜಿಯೊಂದರಿಂದ 2 ಲ್ಯಾಪ್‌ಟಾಪ್‌ಗಳು, ಹಣ ಮತ್ತು ಎಟಿಎಂ ಕಾರ್ಡನ್ನು ಕಳವು ಮಾಡಿರುವ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಯೂರ್ ನಾಯ್ಕ ಮತ್ತು ಚರಣ್ ಎಂಬವರು ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆ.9ರಂದು ರಾತ್ರಿ ಕಂಪೆನಿಯ ಕೆಲಸ ಮುಗಿಸಿ ಬೇರೆ ಬ್ಯಾಗ್‌ಗಳಲ್ಲಿ 2 ಲ್ಯಾಪ್‌ಟಾಪ್‌ಗಳನ್ನಿಟ್ಟು ಮಲಗಿದ್ದರು. ಮರುದಿನ ಬೆಳಗ್ಗೆ 8 ಗಂಟೆಗೆ ಎದ್ದು ನೋಡಿದಾಗ ಲ್ಯಾಪ್‌ಟಾಪ್‌ಗಳು, 800 ರೂ., ಎಟಿಎಂ ಕಾರ್ಡ್ ಸಹಿತ ಅಂದಾಜು 2,11,500 ರೂ. ಮೌಲ್ಯದ ಸೊತ್ತುಗಳು ಕಳವಾಗಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *