Visitors have accessed this post 672 times.
ಮಂಗಳೂರು: ಕೊಣಾಜೆ ಗ್ರಾಮದ ನಡುಪದವಿನ ಯುವಕನೋರ್ವ ಅಬುಧಾಬಿಯಲ್ಲಿ ಕಟ್ಟಡದಿಂದ ಬಿದ್ದು ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
ಮೃತಪಟ್ಟ ಯುವಕನನ್ನು ಉಮ್ಮರ್ ಎಂಬವರ ಪುತ್ರ ನೌಫಲ್(25) ಎಂದು ಗುರುತಿಸಲಾಗಿದೆ.
ಅಬುಧಾಬಿಯಲ್ಲಿ ಎ.ಸಿ ಮೆಕ್ಯಾನಿಕ್ ಆಗಿ ಕೆಲಸಮಾಡುತ್ತಿದ್ದ ನೌಫಲ್ ಕಟ್ಟಡವೊಂದರಲ್ಲಿ ಕೆಲಸ ಮಾಡುವಾಗ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.