Visitors have accessed this post 105 times.
ಮುಹಿಯುದ್ದೀನ್ ಜುಮ್ಮ ಮಸೀದಿ ಹಾಗೂ ನೂರುಲ್ ಹುದಾ ಮದ್ರಸದ ವತಿಯಿಂದ ಪಾಟ್ರಕೋಡಿಯಲ್ಲಿ ಸಂಭ್ರಮದಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಜಮಾಹತ್ ಸದಸ್ಯರು ಹಾಗು ಮದ್ರಸ ವಿದ್ಯಾರ್ಥಿಗಳು,
ಕೆದಿಲ: ಕೆದಿಲ ಗ್ರಾಮ ಪಂಚಾಯತ್ ಗೆ ಒಳಪಟ್ಟ ಪಾಟ್ರಕೋಡಿ ಮಹಿಯದ್ದಿನ್ ಜುಮಾ ಮಸೀದಿಯಲ್ಲಿ ಜಮಾಹತ್ ಹಾಗು ನೂರುಲ್ ಹುದಾ ಮದ್ರಸ ವಿದ್ಯಾರ್ಥಿಗಳು 78ನೆ ಸ್ವತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಿದರು.
ಪಾಟ್ರಕೋಡಿ ಮಸೀದಿಯ ಅಧ್ಯಕ್ಷ ರಾದ ಬಾತೀ಼ಷ್ ಹಾಜಿ ಪಾಟ್ರಕೋಡಿ, ರವರು ದ್ವಜರೋಹನಗೈದರು, ಈ ಕಾರ್ಯಕ್ರಮದಲ್ಲಿ ಮಸೀದಿ ಖತೀಬರಾದ ಖಲಂದರ್ ಶಾಫಿ, ಬಾಖವಿ ಅಲ್ ಮನ್ನಾನಿ ರವರು ಸ್ವಾತಂತ್ರ್ಯ ದ ಮಹತ್ವವನ್ನು ವಿವರಿಸಿದರು
ಪ್ರದಾನ ಕಾರ್ಯದರ್ಶಿಗಳಾದ ತಸ್ರೀಫ್ ಟಿ., ಮಸೀದಿ ಮಾಜಿ ಅಧ್ಯಕ್ಷರಾದ ಹಮಿದ್ ಹಾಜಿ ಕೋಡಿ. ಇಸುಬು ಕೆ.ಎಸ್., ಹಾಗು ಉಸ್ಮಾನ್ ಬಾಯಬೆ. ಖಾಸೀಂ ಕೆ.ಪಿ. , ಮುಹಮ್ಮದ್ ಮಾಸ್ಟರ್, ಮದ್ರಸ ಗುರುಗಳಾದ ಇಸಾಖ್ ಅಝಾರಿ. ರವರು ಜಮಾಹತ್ ಸದಸ್ಯರು ಮದ್ರಸ ವಿದ್ಯಾರ್ಥಿಗಳು, ಯುವಕರು
ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿದರು
ಸದರ್ ಉಸ್ತಾದ್ ಹನೀಫ್ ಸಖಾಫಿ ಸ್ವಾಗತಿಸಿದರೆ, ಮುನೀರ್ ಮದನಿರವರು ಪ್ರಮಾಣ ವಚನ ಭೋದಿಸಿದರು, ಶರೀಫ್ ಕೊಲ್ಪೆರವರು ಕಾರ್ಯಕ್ರಮವನ್ನು ನಿರ್ವಹಣೆಗೈದರು