ಹೀಗಾಗಿ ಗೇಟ್ ದುರಸ್ಥಿ ಕಾರ್ಯದಲ್ಲಿ ತೊಡಗಿಸಿಕೊಂಡ ಕಾರ್ಮಿಕರಿಗೆ ಸಚಿವ ಜಮೀರ್ ಅಹ್ಮದ್ ತಲಾ 50 ಸಾವಿರ ರೂ. ಬಹುಮಾನ ಹಣ ನೀಡುವುದಾಗಿ ಘೋಷಣೆ ಮಾಡಿದ್ದರು. ಸಾಮಾನ್ಯವಾಗಿ ಕೆಲಸವಾದ ಮೇಲೆ ರಾಜಕಾರಣಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಅಪರೂಪ.
ಆದರೆ ಗೇಟ್ ದುರಸ್ಥಿ ಮಾಡಿ ತಮ್ಮ ಸರ್ಕಾರದ ಮಾನ ಕಾಪಾಡಿದ ಕಾರ್ಮಿಕರಿಗೆ ಜಮೀರ್ ಅಹ್ಮದ್ ಕೊಟ್ಟ ಮಾತಿನಂತೇ ಬಹುಮಾನ ಹಣ ನೀಡಿದ್ದಾರೆ. ಗೇಟ್ ದುರಸ್ಥಿಯಾಗುತ್ತಿದ್ದಂತೇ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಎಲ್ಲಾ ಕಾರ್ಮಿಕರಿಗೆ ತಲಾ 50 ಸಾವಿರ ರೂ. ಹಣ ನೀಡಿದ್ದಾರೆ. ಕ್ರೇನ್ ಆಪರೇಟರ್, ಗೇಟ್ ಇಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡವರು ಸೇರಿದಂತೆ ಸುಮಾರು 20 ಕಾರ್ಮಿಕರಿಗೆ 50 ಸಾವಿರ ರೂ. ಬಹುಮಾನ ಹಣ ನೀಡಲಾಗಿದೆ.