Visitors have accessed this post 1798 times.
ಉಡುಪಿ : ಸಾಮಾಜಿಕ ಜಾಲತಾಣಗಳನ್ನು ಎಷ್ಟು ಕಡಿಮೆ ಬಳಸುತ್ತೇವೆಯೋ ಅಷ್ಟೇ ಒಳ್ಳೆಯದು. ಅತಿಯಾದರೆ ಅಮೃತವು ವಿಷ ಎಂಬಂತೆ ಇದೀಗ ಪತ್ನಿಯ ರೀಲ್ಸ್ ಹುಚ್ಚಾಟಕ್ಕೆ ಬೇಸತ್ತ ಪತಿಯೊಬ್ಬ, ಕತ್ತಿಯಿಂದ ಪತ್ನಿಯ ಕತ್ತುಹಿಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು ರೀಲ್ಸ್ ಹುಚ್ಚಾಟಕ್ಕೆ ಬೇಸತ್ತು ಹೆಂಡತಿಯನ್ನು ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಕತ್ತಿಯಿಂದ ಕಡಿದು ಪತ್ನಿಯ ಕೊಲೆಗೈದ ಪತಿ ಕಿರಣ್ ಉಪಾಧ್ಯಾಯ, ಪತ್ನಿ ಜಯಶ್ರೀ (28) ಹತ್ಯೆಯಾಗಿದೆ. ಹತ್ಯೆ ಮಾಡಿ ಮನೆಯಲ್ಲಿದ್ದ ಆರೋಪಿಯನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.