ವಿಟ್ಲ: ಬಿಸಿನೆಸ್ ನಲ್ಲಿ ಲಾಭ ನೀಡುತ್ತೇನೆ ಎಂದು ಅಮಾಯಕ ಯುವಕನನ್ನು ನಂಬಿಸಿ ಆತನಿಂತ ಲಕ್ಷಾಂತರ ರೂ. ಪಡೆದು ಇದೀಗ ಅಸಾಮಿ ಪರಾರಿಯಾಗಿದ್ದಾನೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸಾಲೆತ್ತೂರು ನಿವಾಸಿ ಆಸೀಫ್ ಎಂಬಾತನಿಗೆ ಈ ಹಿಂದೆ ವಿದೇಶದಲ್ಲಿದ್ದ ವೇಳೆ ಸಿದ್ದೀಕ್ ವಿದ್ಯಾನಗರ ಮುಡಿಪು ಎಂಬಾತನ ಪರಿಚಯವಾಗುತ್ತದೆ. ಬಳಿಕ ಆತನ ಜತೆ ಆತ್ಮೀಯತೆಯಿಂದ ಒಡನಾಟ ಇಟ್ಟುಕೊಂಡಿರುತ್ತಾನೆ. ಬಳಿಕ ಆಸೀಫ್ ಊರಿಗೆ ಬಂದಿದ್ದು, ತದ ಬಳಿಕ ಅಸಾಮಿ ಸಿದ್ದೀಕ್ ವಿದ್ಯಾನಗರ ಕೂಡ ಊರಿಗೆ ಬಂದು, ಆಸೀಪ್ ನನ್ನು ಸಂಪರ್ಕ ಮಾಡಿರುತ್ತಾನೆ.
ಆಸೀಪ್ ನಲ್ಲಿ ಬಿಸಿನೆಸ್ ಮಾಡುವ ಎಂದು ಹೇಳಿ ವಿವಿಧ ದಿನಗಳಲ್ಲಿ ಒಟ್ಟು 2.50 ಲಕ್ಷ ರೂ. ವರೆಗೆ ಹಣ ಪಡೆದಿರುತ್ತಾನೆ. ನಿನ್ನಿಂದ ಪಡೆದ ಹಣವನ್ನು ಬಿಸಿನೆಸ್ ಗೆ ಹಾಕಿದ್ದು, ನಿನಗೆ ತಿಂಗಳು ತಿಂಗಳು ಲಾಭ ನೀಡುತ್ತೇನೆ ಎಂದು ನಂಬಿಸಿದ್ದು, ದಿನಕಳೆದಂತೆ ಲಾಭ ಇರಲಿ, ಕೊಟ್ಟ ಹಣವನ್ನು ಕೇಳಿದಾಗ ಒಂದೊಂದು ನೆಪ ಹೇಳಿ ತಪ್ಪಿಸಿಕೊಂಡಿದ್ದಾನೆ.
ಇದೀಗ ಸಿದ್ದೀಕ್ ನಾಪತ್ತೆಯಾಗಿದ್ದು ಅಸೀಪ್ ನ ಕರೆ ಮತ್ತು ಮೆಸೇಜ್ ಬಾರದಂತೆ ನಂಬ್ರ ಬ್ಲಾಕ್ ಮಾಡಿರುತ್ತಾನೆ. ಇದೀಗ ಆಸಾಮಿ ಊರಿಂದ ಭೂಗತನಾಗಿರುತ್ತಾನೆ ಎಂದು ಆಸೀಫ್ ವಿಟ್ಲ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ