May 6, 2026
WhatsApp Image 2024-10-10 at 2.49.37 PM

ಮಂಡ್ಯ: ಜಿಲ್ಲೆಯ ವ್ಯಕ್ತಿಯೊಬ್ಬ 500 ರೂಪಾಯಿ ಕೊಟ್ಟು ಕೇರಳದ ಲಾಟರಿ ಟಿಕೆಟ್ ಖರೀದಿಸಿದ್ದರು. ಅವರ ಅದೃಷ್ಟ ಖುಲಾಯಿಸಿದೆ. 500 ರೂ ಕೊಟ್ಟು ಖರೀದಿಸಿದಂತ ಲಾಟರಿಗೆ ಬರೋಬ್ಬರಿ 25 ಕೋಟಿ ಬಹುಮಾನ ಬಂದಿದೆ. ಈ ಮೂಲಕ ಮಂಡ್ಯದ ಕುವರನೊಬ್ಬ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ.

ಹೌದು. ಕೇರಳ ಲಾಟರಿಯಲ್ಲಿ ಮಂಡ್ಯದ ಕುವರನೊಬ್ಬ ಕೋಟಿ ಕೋಟಿ ಗೆದ್ದಿದ್ದಾನೆ. ಪಾಂಡವಪುರ ಪಟ್ಟಣದ ವ್ಯಕ್ತಿಗೆ ಒಲಿದ 25 ಕೋಟಿ ಬಹುಮಾನ ಬಂದಿದೆ. ಪಾಡವಪುರ ನಗರದ ಸ್ಕೂಟರ್ ಮೆಕ್ಯಾನಿಕ್ ಅಲ್ತಾಫ್ ಗೆ ಲಾಟರಿಯಲ್ಲಿ ಬಂಪರ್ ಲಕ್ ಹೊಡೆದಿರೋದು.

ಇತ್ತೀಚೆಗೆ ಕೇರಳಕ್ಕೆ ಹೋಗಿದ್ದ ವೇಳೆ 500 ರೂ. ಕೊಟ್ಟು ಲಾಟರಿ ಖರೀದಿದ್ದರು. ಅಲ್ತಾಫ್ ಖರೀದಿಸಿದ್ದ ಆ ಲಾಟರಿ ಟಿಕೆಟ್ ಗೆ 25 ಕೋಟಿ ರೂ. ಬಂಪರ್ ಬಹುಮಾನ ಬಂದಿದೆ. ತೆರಿಗೆ ಕಳೆದು ಅಲ್ತಾಫ್ ಗೆ ಸುಮಾರು 17.5 ಕೋಟಿ ರೂ ಸಿಗಲಿದೆ.

ಕೋಟಿ ರೂ ಬಹುಮಾನದ ಹಣ ತರಲು ಕೇರಳಕ್ಕೆ ಅಲ್ತಾಫ್ ಹಾಗೂ ಕುಟುಂಬ ದೌಡಾಯಿಸಿದೆ. ಈ ಮೂಲಕ ಕೇರಳದ ಲಾಟರಿ ಭಾಗ್ಯದಲ್ಲಿ ಮಂಡ್ಯದ ಪಾಂಡವಪುರದ ಬಡ ಮೆಕ್ಯಾನಿಕಲ್ ಈಗ ಕೋಟ್ಯಾಧಿಪತಿಯಾದಂತೆ ಆಗಿದೆ.

About The Author

Leave a Reply