![](https://i0.wp.com/mediaonekannada.com/wp-content/uploads/2024/09/WhatsApp-Image-2024-09-24-at-7.15.49-PM.jpeg?fit=1166%2C1600&ssl=1)
ಬೆಂಗಳೂರಿನಲ್ಲಿ ಇಂದು ವಾಜಪೇಯಿ ಜನ್ಮದಿನದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆಯಲಾಗಿದ್ದು, ಇದೀಗ ಮೊಟ್ಟೆ ಎಸೆದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
![](https://i0.wp.com/mediaonekannada.com/wp-content/uploads/2024/11/WhatsApp-Image-2024-11-05-at-10.49.10.jpeg?fit=1091%2C839&ssl=1)
![](https://i0.wp.com/mediaonekannada.com/wp-content/uploads/2024/11/WhatsApp-Image-2024-11-04-at-13.51.12.jpeg?fit=1200%2C1000&ssl=1)
![](https://i0.wp.com/mediaonekannada.com/wp-content/uploads/2024/10/IMG-20241029-WA0008.jpg?fit=1600%2C1191&ssl=1)
![](https://i0.wp.com/mediaonekannada.com/wp-content/uploads/2024/10/IMG-20241029-WA0009.jpg?fit=1431%2C859&ssl=1)
ಇಂದು ಬೆಂಗಳೂರಿನ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದಿರುವ ಘಟನೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ. ಬಳಿಕ ಹಲ್ಲೆ ಯತ್ನಿಸಿದ್ದಾರೆ ಎನ್ನುವ ಅರೋಪವೂ ಕೇಳಿಬಂದಿದೆ. ವಾಜಪೇಯಿ ಜನ್ಮದಿನ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಬಿಜೆಪಿ ಶಾಸಕ ಮುನಿರತ್ನ ಕಾರಿನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ ಎನ್ನಲಾಗಿದೆ. ನಂದಿನ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ ಕುಮಾರ್ ಸಮಾಧಿ ಬಳಿ ಘಟನೆ ನಡೆದಿದ್ದು, ಘಟನೆ ಖಂಡಿಸಿ ಶಾಸಕ ಮುನಿರತ್ನ ಹಾಗೂ ಬೆಂಬಲಿಗರು ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
![](https://i0.wp.com/mediaonekannada.com/wp-content/uploads/2024/10/addd.jpg?fit=720%2C1436&ssl=1)