April 18, 2026
WhatsApp Image 2026-04-10 at 10.53.41 AM

 ಕಾರಿಗೆ ಬೆಂಕಿ ತಗುಲಿ ಚಾಲಕ ಸಜೀವ ದಹನ ಕೇಸ್ ಗೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಈ ಒಂದು ಘಟನೆ ನಡೆದಿತ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಈ ಒಂದು ಘಟನೆ ನಡೆದಿಡ್ಮತ್ತು.

ಮೋಸ್ಟ್ ವಾಂಟೆಡ್ ಆರೋಪಿಯ ಕೊಲೆ ಮಾಡಿರುವುದು ಇದೀಗ ತನಿಖೆಯಲ್ಲಿ ಬಯಲಾಗಿದೆ. ಬೆಳಗಾವಿ ಮೂಲದ ನಿತೀಶ್ ಡಾಪಳೆ ಅನ್ನು ಆರೋಪಿಗಳು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸುಮಾರು 50ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣದ ಆರೋಪಿ ಯಾಗಿರುವ ನಿತೀಶ್ನನ್ನು ಕೊಲೆ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ತನ್ನ ಸಹಚರರಿಂದಲೇ ನಿತೀಶ್ ಹತ್ಯೆಯಾಗಿದ್ದಾನೆ. ಕಾರಿನಲ್ಲಿ ನಿತೀಶ್ ಡಾಂಬಳೆ ಶವ ಅರಬೈಲ್ ಘಟ್ಟಕ್ಕೆ ತಂದಿದ್ದರು.

ಕಾರಿಗೆ ಬೆಂಕಿ ಹಾಕಿ ಶವವನ್ನು ಸುಟ್ಟು ಹಾಕಿದ್ದರು. ಪೊಲೀಸರು ಸದ್ಯ ಮೂವರನ್ನು ಬಂಧಿಸಿದ್ದು ನಯಿಮ್ ಮೌಲ ದಾದಾಪೀರ್ ಹಾಗೂ ಸೋಯಬ್ ಎನ್ನುವವರನ್ನು ಅರೆಸ್ಟ್ ಮಾಡಿದ್ದಾರೆ ಬಂಧಿತ ಮೂವರು ಆರೋಪಿಗಳು ಹುಬ್ಬಳ್ಳಿ ಮೂಲದವರು ಎನ್ನಲಾಗಿದೆ. ಇನ್ನುಳಿದ ಶಾನು, ಜಮೀರ್ ಅಯೂಬ್ ಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಆರಂಭದಲ್ಲಿ ಇದೊಂದು ಅಪಘಾತ ಪ್ರಕರಣ ಎಂದು ದಾಖಲಿಸಲಾಗಿತ್ತು ಪೊಲೀಸರ ತನಿಖೆಯಲ್ಲಿ ನಿತೀಶ್ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

About The Author

Leave a Reply