

ಚಿಕ್ಕಮಗಳೂರು :ಕಡೂರು ತಾಲ್ಲೂಕು ಶೈಕ್ಷಣಿಕ ವಲಯಕ್ಕೆ ಶೇ. 90.48 ರಷ್ಟು ಫಲಿತಾಂಶ ದೊರೆತಿದ್ದು ಅದರಲ್ಲಿ 351 ವಿದ್ಯಾರ್ಥಿಗಳು ಅತ್ಯುತ್ತಮ ಸ್ರೇಣಿಯಲ್ಲಿದ್ದಾರೆ. ಪ್ರಥಮ ದರ್ಜೆಯಲ್ಲಿ 379 ದ್ವಿತೀಯ ದರ್ಜೆಯಲ್ಲಿ 278 ವಿದ್ಯಾರ್ಥಿಗಳು ಅಂಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಡೂರು ವಲಯಕ್ಕೆ ಸಂಭಂದಿಸಿದ ಶಾಲೆಗಳು ಹಾಗು ಫಲಿತಾಂಶ ವೇದಾವತಿ ಬಾಲಕಿಯರ ಪ್ರೌಢಶಾಲೆಯ ಚೇತನ ಎಚ್. ಜಿ. 617. ಹೈವೆ ಇಂಗ್ಲಿಷ್ ಶಾಲೆಯ ಪೃಥ್ವಿ 616. ಸನ್ನಿಧಿ 614 ಅಂಕ ಗಳಿಸುವ ಮೂಲಕ ತಾಲ್ಲೂಕಿಗೆ ಗೌರವಕಿರೀಟ ತಂದು ಕೊಟ್ಟಿದ್ದಾರೆ. ಮತ್ತು ಮುರಾರ್ಜಿದೇಸಾಯಿ ಶಾಲೆ ಗೆದ್ದಲೇಹಳ್ಳಿ ತೃಪ್ತಿ 607ಅಂಕ. ಹಾಗೂ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸ್ನೇಹ ಅವರು 602 ಅಂಕ ಗಳಿಸುವ ಮೂಲಕ ಕಡೂರು ಶೈಕ್ಷಣಿಕ ವಲಯಕ್ಕೆ ಗೌರವ ತರುವಲ್ಲಿ ಶ್ರಮಿಸಿದ್ದಾರೆ.






