

ಕಣ್ಣೂರು: ಮಾನಾಲ ನಿವಾಸಿ, ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಸದಸ್ಯ ಹಾಗೂ ಸಮಾಜ ಸೇವಕ, ವೃತ್ತಿಯಿಂದ ರಿಕ್ಷಾ ಚಾಲಕರಾಗಿದ್ದ ಸೂರಜ್ (54) ಅವರು ಶುಕ್ರವಾರ ದಿನಾಂಕ 08/05/2026 ರಂದು ಒಲೆಯನ್ಶಿಯಾ ಸರ್ಕಲ್ ಬಳಿಯ ಜ್ಯೂಸ್ ಅಂಗಡಿಯಲ್ಲಿ ಹಠಾತ್ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಮೂವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಸೂರಜ್ ಅವರು ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್‌ನ ಕ್ರಿಯಾಶೀಲ ಸದಸ್ಯರಾಗಿದ್ದರು. ಬಡವರ ಕಲ್ಯಾಣ, ಶೈಕ್ಷಣಿಕ ನೆರವು ಸೇರಿದಂತೆ ಹಲವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಸಂತಾಪ
ಸೂರಜ್ ಅವರ ಅಕಾಲಿಕ ನಿಧನಕ್ಕೆ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಸಂಘದ ಅಧ್ಯಕ್ಷ ಲತೀಫ್ ಕುಂಡಾಲ ಹಾಗೂ ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ಮೀಡಿಯಾ ಒನ್ ಡೈರೆಕ್ಟರ್ ತನ್ವೀರ್ ಅವರು ಸಂತಾಪ ಸೂಚಿಸಿ, ಸೂರಜ್ ನಮ್ಮ ಆತ್ಮೀಯ ಸ್ನೇಹಿತರು ಮತ್ತು ಸಂಘದ ಸಕ್ರಿಯ ಸದಸ್ಯರಾಗಿದ್ದರು. ಹಲವಾರು ಸಮಾಜಮುಖಿ ಕೆಲಸಗಳಲ್ಲಿ ಅವರು ಪಾಲ್ಗೊಂಡಿದ್ದರು. ಅವರ ಹಠಾತ್ ಮರಣದಿಂದ ನಮ್ಮ ಸಂಘ ಸಂಸ್ಥೆಗೆ ತುಂಬಲಾರದ ನಷ್ಟವಾಗಿದೆ” ಎಂದು ಹೇಳಿದ್ದಾರೆ.






