May 30, 2026
WhatsApp Image 2026-05-30 at 2.18.44 PM

ಮಂಗಳೂರು:ಮೊಯಿದೀನ್ ತಬ್ಶೀರ್ ದಾರನಿ ಅವರ ಸ್ಮರಣಾರ್ಥವಾಗಿ ಬಜ್ಪೆಯಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಹಯೋಗದಲ್ಲಿ ನಡೆಯಲಿರುವ ಈ ಶಿಬಿರವು ಮೇ 31ರಂದು ಭಾನುವಾರ ಬಜ್ಪೆಯ ಎಂ.ಜೆ.ಎಂ ಹಾಲ್‌ನಲ್ಲಿ ನಡೆಯಲಿದೆ.

ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿರುವ ಶಿಬಿರದಲ್ಲಿ ಆರೋಗ್ಯವಂತ ನಾಗರಿಕರು ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಮಾನವೀಯ ಕಾರ್ಯದಲ್ಲಿ ಪಾಲ್ಗೊಳ್ಳಲು ವಿನಂತಿ.

ಸಮಾಜ ಸೇವೆಯ ಉದ್ದೇಶದಿಂದ ಆಯೋಜಿಸಲಾಗಿರುವ ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ರಕ್ತದಾನ ಮಾಡುವಂತೆ ಮನವಿ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಆಸಿಫ್ ಆಂಬುಲೆನ್ಸ್ (9663434072), ಹಮೀದ್ ಬಜ್ಪೆ (9986911792), ಹಫೀಝ್ ಕೊಳಂಬೆ (7204148872) ಹಾಗೂ ಸಿದ್ದಿಕ್ ಮಂಜೇಶ್ವರ (9845707090) ಅವರನ್ನು ಸಂಪರ್ಕಿಸಬಹುದು.

About The Author

Leave a Reply