

ಅಂಕೋಲ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ವರದರಾಜ್ ಹೋಟೆಲ್ ಸಮೀಪ ಶನಿವಾರ ಸಂಭವಿಸಿದೆ.
ಕಾರವಾರದಿಂದ ಉಡುಪಿ ಕಡೆಗೆ ಸಚಿವರನ್ನು ಎಸ್ಕಾರ್ಟ್ ಮಾಡಿಕೊಂಡು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಸಚಿವರ ಮಾನವೀಯತೆ, ಚಾಲಕನ ಸಮಯಪ್ರಜ್ಞೆ ಅಪಘಾತ ಸಂಭವಿಸಿದ ತಕ್ಷಣ ಸಚಿವ ಯು.ಟಿ. ಖಾದರ್ ಅವರು ಮಾನವೀಯತೆ ಮೆರೆದಿದ್ದು, ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಂಡು ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ಸಚಿವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ಸಚಿವ ಯುಟಿ ಖಾದರ್ ಅವರು ಸಮಯಪ್ರಜ್ಞೆ ಮೆರೆದ ಬೆಂಗಾವಲು ವಾಹನ ಚಾಲಕನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.






