July 6, 2026
WhatsApp Image 2026-07-06 at 12.10.44 PM

ಮಂಗಳೂರು : ನಗರದ ಶಕ್ತಿನಗರದ ನೀತಿನಗರ ನಿವಾಸಿ ರಿದ್ದಿ ಪ್ರಿಯಾಲ್ (16) ಗಂಭೀರ ಆರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸೆಗೆ ಅಪಾರ ವೆಚ್ಚ ಅಗತ್ಯವಿರುವ ಹಿನ್ನೆಲೆಯಲ್ಲಿ ಕುಟುಂಬವು ಸಹೃದಯರಲ್ಲಿ ನೆರವಿನ ಮನವಿ ಮಾಡಿದೆ.

ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ರಿದ್ದಿ ಪ್ರಿಯಾಲ್ ಅವರಿಗೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಯ ಬಳಿಕ ಗಂಭೀರ ಆರೋಗ್ಯ ತೊಂದರೆ ಉಂಟಾಗಿದೆ. ಪ್ರಸ್ತುತ ಅವರು ಜೀವ ರಕ್ಷಕ ಚಿಕಿತ್ಸೆಯಾದ ವಿಎ-ಇಸಿಎಂಒ (ವೆನೋ-ಆರ್ಟೀರಿಯಲ್ ಎಕ್ಸ್ಟ್ರಾಕಾರ್ಪೋರಿಯಲ್ ಮೆಂಬ್ರೇನ್ ಆಕ್ಸಿಜನೇಷನ್) ಮೂಲಕ ನಗರದ ಜ್ಯೋತಿ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜು. 1 ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದ ಅವರನ್ನು ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಜು. 4 ರಂದು ವಿಎ-ಇಸಿಎಂಒ ಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ಚಿಕಿತ್ಸೆಯನ್ನು ಆರಂಭಿಸಲು ಸುಮಾರು 6 ಲಕ್ಷ ರೂ. ವೆಚ್ಚವಾಗಿದ್ದು, ಮುಂದಿನ ಚಿಕಿತ್ಸೆಗೆ ಪ್ರತಿದಿನ ಸುಮಾರು 2.5 ಲಕ್ಷ ರೂ. ಅಗತ್ಯವಿದೆ. ಒಟ್ಟಾರೆ 30 ದಿನಗಳ ಚಿಕಿತ್ಸೆಗೆ ಅಂದಾಜು 85 ಲಕ್ಷ ರೂ. ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತ ಭರಿಸುವುದು ಕುಟುಂಬಕ್ಕೆ ಸಾಧ್ಯವಾಗದ ಕಾರಣ, ಮಗಳ ಜೀವ ಉಳಿಸಲು ದಾನಿಗಳು ಮತ್ತು ಸಹೃದಯರು ತಮ್ಮ ಕೈಲಾದ ನೆರವು ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಸಹಾಯ ಮಾಡಲಿಚ್ಚಿಸುವವರು ಈ ಖಾತೆಗೆ ಹಣ ಪಾವತಿಸಬಹುದು.
ವಿವರಗಳು :

  • ಖಾತೆದಾರರ ಹೆಸರು : ಹೇಮಂತ್ ಕುಮಾರ್ (ತಂದೆ)
  • ಬ್ಯಾಂಕ್ : ಬ್ಯಾಂಕ್ ಆಫ್ ಇಂಡಿಯಾ
  • ಖಾತೆ ಸಂಖ್ಯೆ : 844010100007916
  • ಐ.ಎಫ್.ಎಸ್.ಸಿ : BKID0008440
  • ಶಾಖೆ : ಕೆ.ಎಸ್. ರಾವ್ ರಸ್ತೆ, ಮಂಗಳೂರು

About The Author

Leave a Reply