July 10, 2026
WhatsApp Image 2026-07-10 at 9.26.41 AM

ಶಿಕ್ಷಕಿ ಬೈದಿದಕ್ಕೆ 8ನೇ ತರಗತಿ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಮರಸೂರು ಮಡಿವಾಳದ ಮನೆಯಲ್ಲಿ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮರಸೂರು ಮಡಿವಾಳದ ಮನೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮಧುಶ್ರೀ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. 

ಪೋಷಕರು ಬೆಳಿಗ್ಗೆ ನೋಡಿದಾಗ ನೇಣಿಗೆ ಶರಣಾಗಿದ್ದು ಬೆಳಕಿಗೆ ಬಂದಿದೆ. ಡೆತ್ ನೋಟ್ ನಲ್ಲಿ ಶಾಲೆಯಲ್ಲಿ ನಡೆದ ಘಟನೆ ಯ ಬಗ್ಗೆ ಉಲ್ಲೇಖ ಮಾಡಿದ್ದು, ನನ್ನ ವಿರುದ್ಧ ಇಲ್ಲಸಲ್ಲದ ಅಪವಾದವನ್ನು ಹೊರಿಸಿದ್ದಾರೆ. ಅವಮಾನ ಸಹಿಸಿಕೊಂಡು ನನಗೆ ಬದುಕಲು ಆಗುತ್ತಿಲ್ಲ. ಮನಸ್ಸಿಗೆ ಹೆಚ್ಚು ನೋವಾಗಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದೇನೆ. 

ಅಮ್ಮ, ಅಕ್ಕ, ತಂಗಿ, ತಮ್ಮ ಯಾರದ್ದು ತಪ್ಪಿಲ್ಲ ಎಂದು ಉಲ್ಲೇಖಿಸಿದ್ದು, ಅಮ್ಮನನ್ನು ಯಾರು ಬೈಯ್ಯಬೇಡಿ ಎಂದು ಮಧುಶ್ರೀ ಡೆತ್ ನೋಟ್ ನಲ್ಲಿ ಬರೆದಿದ್ದಾಳೆ. ಈ ಭೂಮಿ ಮೇಲೆ ನನಗೆ ಬದುಕುವ ಯಾವುದೇ ಅರ್ಹತೆ ಇಲ್ಲ. ಅಮ್ಮ ಸೇರಿದಂತೆ ಎಲ್ಲರೂ ನನ್ನನ್ನು ಕ್ಷಮಿಸಿ ಎಂದು ಉಲ್ಲೇಖಿಸಿ ನೇಣು ಬಿಗಿದುಕೊಂಡು ಮಧುಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆ ಕುರಿತು ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply