

ದಾವಣಗೆರೆ ಬೈ ಎಲೆಕ್ಷನ್ ನಲ್ಲಿ ಆಡಿಯೋ ಲೀಕ್ ಸಂಬಂಧ ಸಚಿವ ಸ್ಥಾನ ತಪ್ಪಿರುವ ಹಿನ್ನೆಲೆ, ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದು, ಮೊದಲ ಪಟ್ಟಿಯಲ್ಲಿ ನಾನಾಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು ಆದರೆ ಸಿಗಲಿಲ್ಲ. ಎರಡನೇ ಪಟ್ಟಿಯಲ್ಲಿ ಹೆಸರಿದೆ ಅಂತ ಅಂದುಕೊಂಡಿದ್ದೇನೆ. ದಾವಣಗೆರೆ ಉಪಚುನಾವಣೆಯಲ್ಲಿ ಕೆಲವರು ನನ್ನ ಆಡಿಯೋವನ್ನು ನಕಲಿ ಮಾಡಿದರು. AI ಬಳಸಿ ನನ್ನ ಆಡಿಯೋ ಬಿಡುಗಡೆ ಮಾಡಿದರು. ಇದಕ್ಕೆ ಸಂಬಂಧಪಟ್ಟಂತೆ ನಾನು ದೂರು ಸಹ ಕೊಟ್ಟಿದ್ದೇನೆ ಎಂದರು.
ಹಾಗಾಗಿ ಈ ಬಾರಿ ನನಗೆ ನ್ಯಾಯ ಸಿಗುವ ಸಾಧ್ಯತೆ ಇದೆ. ನನ್ನ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೇನೆ ಅಂತ ಅಪಪ್ರಚಾರ ಮಾಡಿದರು ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಾನು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗು ಡಿಕೆ ಶಿವಕುಮಾರ್ ಅವರ ಬಳಿ ಕ್ಷಮೆಯೂ ಕೇಳಿದ್ದೇನೆ. ಹಾಗಾಗಿ ಈ ಬಾರಿ ನನಗೆ ನ್ಯಾಯ ಸಿಗಬಹುದು ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ದೆಹಲಿಗೆ ಹೋದ ತಕ್ಷಣ ಮಂತ್ರಿ ಮಾಡುತ್ತಾರೆ ಎನ್ನುವುದು ತಪ್ಪಾಗುತ್ತದೆ. ಯಾರಿಗಾದರೂ ಮಂತ್ರಿ ಮಾಡಬೇಕಾದರೆ ಅವರದೇ ಆದಂತಹ ಒಂದು ಸರ್ವೆ ಮಾಡುತ್ತಾರೆ. ಪಕ್ಷಕ್ಕೆ ಏನು ಲಾಭ ಆಗುತ್ತದೆ, ಯಾರು ಒಳ್ಳೆ ಕೆಲಸ ಮಾಡುತ್ತಾರೆ ಎಂದು ಸರ್ವೇ ಪ್ರಕಾರ ಮಂತ್ರಿ ಸ್ಥಾನ ಕೊಡುತ್ತಾರೆ. ದೆಹಲಿಗೆ ಹೋದ ತಕ್ಷಣ ಮಂತ್ರಿ ಸ್ಥಾನ ಕೊಡುತ್ತಾರೆ ಎನ್ನುವುದು ತಪ್ಪು. 2023 ರಲ್ಲಿ ಮಂತ್ರಿ ಸ್ಥಾನ ಕೊಟ್ಟಾಗ ಮೂರು ವರ್ಷ ಕೆಲಸ ಮಾಡಿದ್ದೇನೆ. ಇದೀಗ ಎರಡನೇ ಪಟ್ಟಿಯಲ್ಲಿ ನನ್ನ ಹೆಸರು ಬರುತ್ತೆ ಅಂತ ನಿರೀಕ್ಷೆ ಇಟ್ಟಿದ್ದೇನೆ ಅದು ಜಮೀರ್ ಅಹ್ಮದ್ ಅಂತ ತಿಳಿಸಿದರು.

ಹೈಕಮಾಂಡ್ ಏನೆ ನಿರ್ಧಾರ ತೆಗೆದುಕೊಂಡಿರುವ ಅದಕ್ಕೆ ನಾನು ಬದ್ಧನಾಗಿದ್ದೇನೆ. ಮಂತ್ರಿ ಸ್ಥಾನ ಕೊಟ್ಟರು ಕೆಲಸ ಮಾಡುತ್ತೇನೆ. ಪಕ್ಷದ ಕೆಲಸ ಮಾಡು ಅಂದ್ರೆ ಪಕ್ಷದ ಕೆಲಸ ಮಾಡುವುದಕ್ಕೂ ಸಿದ್ಧನಿದ್ದೇನೆ. ದಾವಣಗೆರೆ ಉಪಚುನಾವಣೆಯಲ್ಲಿ ನನ್ನ ವಿರುದ್ಧ ಪ್ರಚಾರ ಮಾಡಲಾಯಿತು. AI ಬಳಸಿ ನಕಲಿ ಧ್ವನಿ ಮೂಲಕ ಅಪಪ್ರಚಾರ ಮಾಡಿದರು. ಈ ಕುರಿತು ದೂರು ಕೊಟ್ಟಿದ್ದೇನೆ ತನಿಖೆ ಸಹ ನಡೆಯುತ್ತಿದೆ. ಈ ಒಂದು ಆಡಿಯೋ ಲೀಕ್ ನಿಂದ ತಪ್ಪು ಸಂದೇಶ ನೀಡಲಾಗಿದೆ. ಹಾಗಾಗಿ ಎರಡನೇ ಪಟ್ಟಿಯಲ್ಲಿ ನಾನು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದೇನೆ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದರು.






