September 1, 2026
WhatsApp Image 2026-09-01 at 11.32.43 AM

ಮಂಗಳೂರು: ಬಸವರಾಯ ರೆಡ್ಡಿ ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಸಾಮಾನ್ಯ ಸಾಮುದಾಯಿಕ ಹೇಳಿಕೆ ನೀಡುತ್ತಾ ಇಸ್ಲಾಮ್ ಶ್ರೇಷ್ಠ ಧರ್ಮ ಎಂಬುದಾಗಿ ಸಾರ್ವಜನಿಕವಾಗಿ ಪ್ರಶಂಸಿರುತ್ತಾರೆ. ಬಸವರಾಯ ರೆಡ್ಡಿ ಯವರದ್ದು ಯಾವುದೇ ರಾಜಕೀಯ ಅಥವಾ ಪ್ರಚೋದನಕಾರಿ ಹೇಳಿಕೆ ಅಲ್ಲ. ಬಸವ ರಾಯ ರೆಡ್ಡಿಯವರು ಯಾವುದೇ ಒಂದು ನಿರ್ಧಿಷ್ಟ ಸಮುದಾಯವನ್ನು ಓಲೈಕೆ ಮಾಡುವ ಹೇಳಿಕೆಯೂ ಅಲ್ಲ, ಈ ಹಿಂದೆ ಹಲವು ಚಿಂತಕರು, ಸಂಶೋಧಕರು, ಬುದ್ಧಿಜೀವಿಗಳು ನೀಡಿದ ಸಾಮಾನ್ಯ ಹೇಳಿಕೆ ಆಗಿರುತ್ತದೆ.
ಆದರೆ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರಿಗೆ, ಬಸವ ರಾಯ ರೆಡ್ಡಿ ಅವರ ಹೇಳಿಕೆಯಿಂದ ಭ್ರಮನಿರಸನ ಗೊಂಡಿದ್ದಾರೆ, ಕಾರಣ ಬಸವ ರಾಯ ರೆಡ್ಡಿಯ ಬಾಯಿಯಿಂದ ಈ ಹೇಳಿಕೆ ಅವರಿಗೆ ಸಹಿಸಲು ಆಗುತ್ತಿಲ್ಲ, ಹೇಳಿಕೆ ನೀಡಿದ ಕಾರಣಕ್ಕಾಗಿ ಬಸವ ರಾಯ ರೆಡ್ಡಿ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ. ಇದು ಆರ್.ಅಶೋಕ್ ಅವರ ಮಾನಸಿಕತೆಯ ವಿಕೃತಿ ಆಗಿದೆ. ಇಸ್ಲಾಮ್ ಧರ್ಮದ ಬಗ್ಗೆ ಬಸವರಾಯ ರೆಡ್ಡಿ ಅವರು ನೀಡಿದ ಹೇಳಿಕೆ , ಸರ್ವರಿಗೂ ಹಿತ ಎನಿಸಿಕೊಂಡರೆ, ಆರ್.ಎಸ್.ಎಸ್. ಮನಸ್ಥಿತಿಯ ಆರ್. ಅಶೋಕ್ ಗೆ ಈ ಹೇಳಿಕೆ ಅಪಥ್ಯ ಆಗಿರುವುದೂ ಸಹಜ ಕೂಡ.
ಆದರೆ ಆರ್.ಅಶೋಕ್ ರವರ ಸಂಘೀ ಮುಖ್ಯಸ್ತ ಮೋಹನ್ ಭಾಗವತ್ ಅಮೆರಿಕೆಗೆ ಹೋಗಿ , ಇಸ್ಲಾಮ್ ಧರ್ಮಾನುಯಾಯಿಗಳಾದ ಮುಸ್ಲಿಮರನ್ನು ಸ್ವೀಕರಿಸದಿದ್ದರೆ ಭಾರತೀಯರು ಹಿಂದೂಗಳಲ್ಲ ಎಂಬಿತ್ಯಾದಿಯಾಗಿ, ಬುರುಡೆ ಬಿಟ್ಟ ವಿಷಯ ಆರ್. ಅಶೋಕ್ ಗೆ ಇನ್ನೂ ಜ್ಞಾನ ಬಂದಿಲ್ಲ ವಿರಬೇಕು. ಆರ್.ಅಶೋಕ್ ಮೊದಲು ಭಾಗವತ್ ವಿದೇಶದಲ್ಲಿ ಮುಸ್ಲಿಮರನ್ನು ಹೊಗಳುವುದನ್ನು ನಿಲ್ಲಿಸಲಿ, ನಂತರ ರಾಯರೆಡ್ಡಿ ನೀಡಿದ ಇಸ್ಲಾಮಿಕ್ ಹೇಳಿಕೆ ಬಗ್ಗೆ ವಿಮರ್ಶಿಸಲಿ.

ಕೆ.ಅಶ್ರಫ್ ( ಮಾಜಿ ಮೇಯರ್)
ಅಧ್ಯಕರು.ದ. ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ

About The Author

Leave a Reply