ಸುಳ್ಯ: ಬಾವಿಯ ಕಾಮಗಾರಿ ವೇಳೆ ಮಣ್ಣಿನಲ್ಲಿ ಸಿಲುಕಿದ ಕಾರ್ಮಿಕ…!

ಬಾವಿಯ ರಿಂಗ್‌ನ ಬದಿಗೆ ಮಣ್ಣು ತುಂಬಿಸುತ್ತಿದ್ದಾಗ ಮಣ್ಣಿನಲ್ಲಿ ಸಿಲುಕಿದ ಕಾರ್ಮಿಕನನ್ನು ರಕ್ಷಿಸಿದ ಘಟನೆ ಶನಿವಾರ ಸಂಜೆ ಸುಳ್ಯದ ಪಂಜದಲ್ಲಿ ನಡೆದಿದೆ.

ಪಂಜದ ಅಡ್ಡತ್ತೋಡು ಸಮೀಪ ಮನೆಯೊಂದರ ಬಾವಿಯ ರಿಂಗ್‌ನ ಹೊರಗಿನ ಬದಿಗೆ ಮಣ್ಣು ತುಂಬುವ ಕೆಲಸವನ್ನು ಕೇರಳದ ಕಾರ್ಮಿಕರು ಮಾಡುತ್ತಿದ್ದರು. ಈ ವೇಳೆ ರಿಂಗ್‌ನ ಬದಿಯ ಮಣ್ಣು ಏಕಾಏಕಿ ಕೆಳಕ್ಕೆ ಕುಸಿದು, ಓರ್ವ ಕಾರ್ಮಿಕನ ದೇಹದ ಮುಕ್ಕಾಲು ಭಾಗ ಮಣ್ಣಿನಲ್ಲಿ ಹೂತು ಹೋಗಿದೆ.

ಕೂಡಲೇ ಸ್ಥಳದಲ್ಲಿದ್ದವರು ಹಾಗೂ ಜೆಸಿಬಿ ಸಹಾಯದಿಂದ ಕಾರ್ಮಿಕನ ಮೇಲಿಂದ ಮಣ್ಣು ತೆಗೆದು ಅವರನ್ನು ರಕ್ಷಿಸಿದ್ದಾರೆ. ಆ ಬಳಿಕ ಅಂಬ್ಯುಲೆನ್ಸ್ನಲ್ಲಿ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Leave a Reply