Visitors have accessed this post 661 times.
ಉಳ್ಳಾಲ: ನಿರ್ಮಾಣ ಹಂತದ ಸೈಟ್ ವಿಸಿಟ್ ಮಾಡುವ ವೇಳೆ ದಿಢೀರ್ ಕುಸಿದು ಬಿದ್ದ ಸಿವಿಲ್ ಇಂಜಿನಿಯರ್ ಓರ್ವರು ಆಸ್ಪತ್ರೆ ಸಾಗಿಸುವ ದಾರಿಯಲ್ಲಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದೆ.
ಮೃತರನ್ನು ಪ್ರವೀಣ್ ಆಚಾರ್ಯ (51) ಎಂದು ಗುರುತಿಸಲಾಗಿದೆ. ಮೂಲತಃ ಮಾಣಿ ,ಅನಂತಾಡಿ ನಿವಾಸಿಯಾಗಿದ್ದ ಪ್ರವೀಣ್ ಪಂಡಿತ್ ಹೌಸಿನ ಬಾಡಿಗೆ ಮನೆಯಲ್ಲಿ ಪತ್ನಿ , ಇಬ್ಬರು ಹೆಣ್ಮಕ್ಕಳೊಂದಿಗೆ ನೆಲೆಸಿದ್ದರು. ಪ್ರವೀಣ್ ಕಳೆದ ಹಲವು ವರುಷಗಳಿಂದ ತೊಕ್ಕೊಟ್ಟುವಿನಲ್ಲಿ ಸಿವಿಲ್ ಇಂಜಿನಿಯರ್ ಕೆಲಸ ನಿರ್ವಹಿಸಿಸುತ್ತಿದ್ದು ಭಟ್ನಗರದಲ್ಲಿ ಕಚೇರಿ ಹೊಂದಿದ್ದರು. ಆದಿತ್ಯವಾರ ಬೆಳಗ್ಗೆ ಪ್ರವೀಣ್ ಅವರು ಉಳ್ಳಾಲ ಒಂಭತ್ತುಕೆರೆಯ ನಿರ್ಮಾಣ ಹಂತದ ಕಟ್ಟಡಕ್ಕೆ ಸೈಟ್ ಪರಿಶೀಲನೆಗೆ ತೆರಳಿದ್ದ ವೇಳೆ ಮೂರನೇ ಅಂತಸ್ತು ಏರುವಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನ ತೊಕ್ಕೊಟ್ಟಿನ ನೇತಾಜಿ ಎಲ್ಲಪ್ಪ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.