February 20, 2026
WhatsApp Image 2024-06-19 at 11.37.34 AM

 ಮೆಕ್ಕಾಗೆ ಹಜ್‌ ಯಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ 98 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಶುಕ್ರವಾರ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಜೈಸ್ವಾಲ್‌, ಕಳೆದ ವರ್ಷ ಇಡೀ ಹಜ್ ಅವಧಿಯಲ್ಲಿ ಒಟ್ಟು 187 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಈ ವರ್ಷ 1,75,000 ಭಾರತೀಯ ಯಾತ್ರಿಕರು ಹಜ್ ಯಾತ್ರೆಗಾಗಿ ಮೆಕ್ಕಾಗೆ ಭೇಟಿ ನೀಡಿದ್ದಾರೆ. ಹಜ್ ಅವಧಿಯು ಮೇ 9 ರಿಂದ ಜುಲೈ 22 ರವರೆಗೆ ಇರುತ್ತದೆ. ಈ ವರ್ಷ ಇಲ್ಲಿಯವರೆಗೆ 98 ಸಾವುಗಳು ವರದಿಯಾಗಿವೆ” ಎಂದು ಅವರು ಹೇಳಿದರು.

“ನೈಸರ್ಗಿಕ ಕಾರಣಗಳು, ದೀರ್ಘಕಾಲದ ಕಾಯಿಲೆಗಳು ಮತ್ತು ವೃದ್ಧಾಪ್ಯದಿಂದಾಗಿ ಸಾವುಗಳು ಸಂಭವಿಸಿವೆ. ಅರಾಫತ್ ದಿನದಂದು ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಅಪಘಾತ ಸಂಬಂಧಿತ ಸಾವುಗಳು” ಎಂದು ತಿಳಿಸಿದ್ದಾರೆ.

About The Author

Leave a Reply