Visitors have accessed this post 582 times.
ಮಂಗಳೂರು : 22-06-2024 ರ ಶನಿವಾರ ಬಂದರು ಸರಕಾರಿ ಉರ್ದು ಪ್ರಾಥಮಿಕ ಶಾಲೆ ಯ 110 ಮಕ್ಕಳಿಗೆ ಉಚಿತ ನೋಟ್ಸ್ ಪುಸ್ತಕ ಅಲ್ ಖೈರ್ ಫೌಂಡೇಶನ್ ಇದರ ಅಧ್ಯಕ್ಷ ಆಶಿಕ್ ದುಬೈ ಮತ್ತು ದಾನಿಗಳ ಸಹಾಯದಿಂದ ಬಂದರ್ ಫ್ರೆಂಡ್ಸ್ (ರಿ) ಮಂಗಳೂರು ಸಂಸ್ಥೆಯ ಮೂಲಕ ನೀಡಲಾಯಿತು. ಶಾಲೆಯ ವಿದ್ಯಾರ್ಥಿಯ ಕಿರಾಹತ್ ನಿಂದ ಕಾರ್ಯಕ್ರಮ ಪ್ರಾರಂಭಿಸಲಾಯಿತು.ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಯವರಾದ ಸಮೀರಾ ಅಖ್ತರ್ ರವರು ಸ್ವಾಗತಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಕೆ.ಅಶ್ರಫ್,ಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಶಂಶುದ್ದೀನ್ ಕಂಡತ್ಪಳ್ಳಿ, ಬಂದರ್ ಫ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷರಾದ ಎಂ.ಕೆ.ಫಯಾಜ್,ಅಲ್ ಖೈರ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ಬಂದರ್ ಫ್ರೆಂಡ್ಸ್ ಸಂಸ್ಥೆಯ ಖಜಾಂಜಿ ನಹೀಂ(ಪಪ್ಪು),ಕೆ.ಇ.ರಶೀದ್,ಕಾಂಗ್ರೆಸ್ ಮುಖಂಡ ಆರಿಫ್ ಬಾವ,ಬಂದರ್ ವಾರ್ಡ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಎಂ.ಮುಸ್ತಫಾ,ಕೊಡುಕೈ ದಾನಿ ಶಾಹುಲ್ ಹಮೀದ್ ತಂಗಲ್,ಎಸ್. ಡಿ.ಎಂ.ಸಿ.ಅಧ್ಯಕ್ಷರಾದ ಹಾಜಿ ಮೊಹಮ್ಮದ್, ಹಾಗೂ ಹಮೀದ್,ಶರೀಫ್,ಮುನಾವರ್.ಎಂ.ಎ,ಬಶೀರ್.K, ಅರ್ಷದ್,ಕೆ. ಪಿ.ಆಸಿಫ್,ಸರಕಾರಿ ಉರ್ದು ಪ್ರೌಡ ಶಾಲೆಯ ಮುಖ್ಯೋಪಾಧ್ಯಾಯರು, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು,ಹಾಗೂ ಶಾಲೆಯ ಶಿಕ್ಷಕರ ವೃಂದ,ಮತ್ತು ಪೋಷಕರ* ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು.