ಮುಸ್ಲಿಂರ ಕೆಲಸವನ್ನು ಸಚಿವ ಈಶ್ವರ ಖಂಡ್ರೆ ಮುಲಾಜಿಲ್ಲದೆ ಮಾಡಬೇಕು- ಜಮೀರ್ ಅಹ್ಮದ್

ಸಚಿವ ಈಶ್ವರ ಖಂಡ್ರೆ ಪುತ್ರ ಮುಸ್ಲಿಮರ ಮತಗಳಿಂದಲೇ ಗೆದ್ದಿದ್ದಾನೆ. ಹೀಗಾಗಿ ಮುಸ್ಲಿಮರ ಕೆಲಸವನ್ನು ಮುಲಾಜಿಲ್ಲದೆ ಮಾಡಬೇಕಾಗುತ್ತದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.

ಹೌದು ಬೀದರ್ನಲ್ಲಿ ಸಚಿವ ಜಮೀರ್ ಅಹಮದ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಚಿವ ಈಶ್ವರ ಖಂಡ್ರೆ ಪುತ್ರ ಮುಸ್ಲಿಮರ ಮತಗಳಿಂದಲೇ ಗೆದ್ದಿದ್ದಾನೆ.

ಹೀಗಾಗಿ ಮುಸ್ಲಿಮರ ಕೆಲಸವನ್ನು ಮುಲಾಜಿಲ್ಲದೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಬೀದರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ.

ಬೀದರ್ ಕ್ಷೇತ್ರದಲ್ಲಿ ಸಾಗರ್ ಖಂಡ್ರೆ ಮುಸ್ಲಿಮರ ಮತದಿಂದ ಗೆಲುವು ಕಂಡಿದ್ದಾನೆ. ನಾನು ಈಶ್ವರ ಖಂಡ್ರೆ ಜೊತೆಗೆ ಮಾತನಾಡುತ್ತೇನೆ, ಕೆಲಸ ನಾನು ಮಾಡಿಸುತ್ತೇನೆ. ಸರ್ವೇ ನಂಬರ್ 93ರ ಖಬರಸ್ಥಾನ ಜಾಗದ ವಿಚಾರವಾಗಿ ಜಮೀರ್ ಅಹ್ಮದ್ ಮಾತನಾಡಿದರು. ಅರಣ್ಯ ಪ್ರದೇಶದ ಜಾಗವಾಗಿದ್ದರಿಂದ ಖಬರಸ್ಥಾನಗೆ ಜಾಗ ನೀಡುತ್ತಿಲ್ಲ ಎಂದು ಕಾರ್ಯಕ್ರಮದಲ್ಲಿ ವ್ಯಕ್ತಿ ಒಬ್ಬರು ಅಳಲು ತೋಡಿಕೊಂಡಿದ್ದರು.

ಅಕ್ಕ ಪಕ್ಕದಲ್ಲಿ ಎಲ್ಲೂ ಜಾಗ ಇಲ್ಲವಾ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಈ ವೇಳೆ ಪ್ರಶ್ನಿಸಿದರು.ಈ ವೇಳೆ ವ್ಯಕ್ತಿ ಮೊದಲಿನಿಂದ ಅದೇ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದೇವೆ ಖಬರಸ್ಥಾನ ಗೆ ಅರಣ್ಯ ಇಲಾಖೆ ಜಾಗ ನೀಡದಿದ್ದಕ್ಕೆ ಇದೀಗ ಸಚಿವ ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Leave a Reply